ಕಾಸರಗೋಡು: ಎಸ್ಸೆಸೆಲ್ಸಿ ಉತ್ತೀರ್ಣರಾಗಿ ಉನ್ನತ ವಿದ್ಯಾಭ್ಯಾಸಕ್ಕೆ ಅರ್ಹತೆ ಹೊಂದಿರುವ ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗಕ್ಕೆ ಸೀಟು ಹಂಚಿಕೆ ಮಾಡುವ ರೀತಿಯಲ್ಲಿ ಪ್ಲಸ್‍ವನ್ ತರಗತಿಯಲ್ಲಿ ಸೀಟು ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಸ್ಲಿಂ ಲೀಗ್ ಕಾಸರಗೋಡು ಮಂಡಲ ಕಾರ್ಯಕಾರಿ ಸಮಿತಿ ಸಭೆ ಸರ್ಕಾರವನ್ನು ಆಗ್ರಹಿಸಿದೆ.
ಪ್ರಸಕ್ತ ಜಿಲ್ಲೆಯಲ್ಲಿ ಸುಮಾರು 4 ಸಾವಿರ ಸೀಟುಗಳ ಕೊರತೆ ಇದ್ದು, ಶಿಕ್ಷಣ ಸಚಿವರು ನಕಲಿ ಅಂಕಿ-ಅಂಶಗಳನ್ನು ತೋರಿಸುವ ಮೂಲಕ ಮಕ್ಕಳ ಭವಿಷ್ಯದೊಮದಿಗೆ ಚೆಲ್ಲಾಟವಾಡುತ್ತಿದ್ದಾರೆ. ಕೇರಳದ ಶಿಕ್ಷಣ ವಲಯವನ್ನು ಕಾಡುವ ಈ ಗಂಭೀರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದೂ ಆಗ್ರಹಿಸಿದೆ.
ಈ ಸಂದರ್ಭ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಸಂಸದ ರಾಜಮೋಹನ್ ಉಣ್ಣಿತ್ತಾನ್ ಅವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು. ಮುಸ್ಲಿಂಲೀಗ್ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿ ಸಭೆ ಉದ್ಘಾಟಿಸಿದರು. ಮಂಡಲ ಸಮಿತಿ ಅಧ್ಯಕ್ಷ ಮಾಹಿನ್ ಕೇಳೋಟ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ ಅಬ್ದುಲ್ ರಹ್ಮಾನ್, ಪಿ.ಎಂ.ಮುನೀರ್ ಹಾಜಿ, ಎ.ಎಂ.ಕಡವತ್, ಅಬ್ದುಲ್ಲಕುಞÂ ಚೆರ್ಕಳ, ಹಾರಿಸ್ ಚೂರಿ, ಕೆ.ಬಿ.ಕುಞËಮು ಹಾಜಿ, ನಾಸರ್ ಚಾಯಿಂಡಡಿ, ಸಿಎ ಅಬ್ದುಲ್ ರಹಮಾನ್, ಎಂಎಎಚ್ ಮಹಮೂದ್, ಟಿ. ಇಮುಕ್ತರ್, ಕೆ. ಅಬ್ದುಲ್ಲಕುಞÂ, ಎಸ್. ಮುಹಮ್ಮದ್, ನಾಸರ್ ಚೆರ್ಕಳಂ, ಕೆ.ಎಂ.ಅಬ್ದುಲ್ ರಹಮಾನ್, ಅಶ್ರಫ್ ಎಡನೀರು ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಟಿ.ಎಂ.ಇಕ್ಬಾಲ್ ಸ್ವಾಗತಿಸಿದರು.