HEALTH TIPS

ವಿರಾಟ್​ ಕೊಹ್ಲಿಯನ್ನು ಎದುರಿಸಲು ನೆಕ್​ ಟು ನೆಕ್​ ಫೈಟ್​ ಇರಬೇಕು; ಯುಎಸ್​ಎ ಆಟಗಾರನ ಹೇಳಿಕೆ ವೈರಲ್

           ನ್ಯೂಯಾರ್ಕ್​: ಇಲ್ಲಿನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಯುಎಸ್​ಎ ನಡುವಿನ ಟಿ-20 ಪಂದ್ಯದಲ್ಲಿ ಟೀಮ್​ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದು, ಎದುರಾಳಿಗಳಿಗೆ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

          ಇತ್ತ ಟೀಮ್​ ಇಂಡಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ಎದುರಾಳಿ ತಂಡದ ಆಟಗಾರರು ಹೇಳಿಕೆ ನೀಡುವುದು ಸಹಜ ಅದೇ ರೀತಿ ಇದೀಗ ಯುಎಸ್​ಎ ತಂಡದ ಆಟಗಾರ ವಿರಾಟ್​ ಕೊಹ್ಲಿ ಕುರಿತು ನೀಡಿರುವ ಹೇಳಿಕೆ ಎಲ್ಲರ ಹುಬ್ಬೇರುವಂತೆ ಮಾಡಿದೆ.

             ಪಂದ್ಯಕ್ಕೂ ಮುನ್ನ ಮಾತನಾಡಿರುವ ಯುಎಸ್​ಎ ಆಟಗಾರ ಅಲಿ ಖಾನ್​, ವಿರಾಟ್​ ಕೊಹ್ಲಿ ಅವರನ್ನು ಎದುರಿಸಲು ಎಲ್ಲಾ ರೀತಿಯಿಂದ ಸಜ್ಜುಗೊಂಡಿದ್ದೇವೆ. ವಿರಾಟ್​ ಕೊಹ್ಲಿ ನನ್ನ ನೆಚ್ಚಿನ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದು, ಅವರ ವಿರುದ್ಧ ಆಡುತ್ತಿರುವುದು ಉತ್ತಮ ಎನ್ನಿಸುತ್ತಿದೆ. ಅವರು ಮೈದಾನದಲ್ಲಿ ಹೇಗೆ ಆಕ್ರಮಣಕಾರಿಯಾಗಿ ಆಡುತ್ತಾರೋ ಅದೇ ರೀತಿ ನಾನು ಇರುತ್ತೇನೆ.

          ನೀವು ಬೆಂಕಿಯೊಂದಿಗೆ ಆಡುತ್ತಿದ್ದೀರಿ ಎಂದು ಪ್ರತಿಬಾರಿಯೂ ತಮ್ಮ ವರ್ತನೆಯಿಂದಲೇ ಹೇಳುತ್ತಾರೆ. ನೆಕ್​ ಟು ನೆಕ್​ ಫೈಟ್​ ಇದ್ದಾಗಲೇ ಅವರ ವಿರುದ್ಧ ಆಡಲು ಖುಷಿ ಕೊಡುತ್ತದೆ. ಇದಕ್ಕಾಗಿಯೇ ಅವರನ್ನು ಕಿಂಗ್​ ಕೊಹ್ಲಿ ಎಂದು ಕರೆಯಲಾಗುತ್ತದೆ ಎಂದು ಯುಎಸ್​ಎ ಆಟಗಾರಿ ಅಲಿ ಖಾನ್​ ನೀಡಿರುವ ಹೇಳಿಕೆ ಸಖತ್​ ವೈರಲ್​ ಆಗುತ್ತಿದೆ.

                ಬುಧವಾರ (ಜೂನ್ 12) ಕ್ರಿಕೆಟ್​ ಶಿಶು ಯುಎಸ್​ಎ ವಿರುದ್ಧ ನಡೆಯುತ್ತಿರುವ ಟಿ-20 ವಿಶ್ವಕಪ್​ ಪಂದ್ಯದಲ್ಲಿ ರೋಹಿತ್​ ಶರ್ಮಾ ಪಡೆಯು ಭರ್ಜರಿ ಗೆಲುವು ಸಾಧಿಸುವ ಮೂಲಕ ಸೂಪರ್​ 8ಗೆ ಲಗ್ಗೆ ಇಡಲು ಸಜ್ಜಾಗಿದ್ದು, ಈ ಬಾರಿ ಕಪ್​ ಗೆಲ್ಲುವ ತಂಡಗಳಲ್ಲಿ ಟೀಮ್​ ಇಂಡಿಯಾ ಕೂಡ ಒಂದಾಗಿದೆ. ಅಂತಿಮವಾಗಿ ಈ ಬಾರಿಯ ಕಪ್​ ಯಾವ ತಂಡದ ಪಾಲಾಗಲಿದೆ ಎಂದು ಕಾದು ನೋಡಬೇಕಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries