HEALTH TIPS

ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿ ವಿಜೇತ ಕೆ.ಕೆ.ಶೆಟ್ಟಿಗೆ ಸೀತಾಂಗೋಳಿಯಲ್ಲಿ ಸಾರ್ವಜನಿಕ ಅಭಿನಂದನೆ

                ಕುಂಬಳೆ:  ಕರ್ನಾಟಕ ಸರ್ಕಾರದ 2024ರ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿಗೆ ಆಯ್ಕೆಯಾದ, ಧಾರ್ಮಿಕ, ಸಾಮಾಜಿಕವಾಗಿ ಗುರುತಿಸಿಕೊಂಡಿರುವ ಕೆ.ಕೆ.ಶೆಟ್ಟಿಯವರಿಗೆ ಸೀತಾಂಗೋಳಿಯ ಅಲೆಯನ್ಸ್ ಸಭಾಂಗಣದಲ್ಲಿ ಜು.13ರಂದು ನಡೆಯಲಿರುವ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆಯುಡಬ್ಲ್ಯೂಜೆ ಕಾಸರಗೋಡು ಜಿಲ್ಲಾ ಘಟಕ ಆಶ್ರಯದಲ್ಲಿ ನಡೆಯುವ ದತ್ತಿನಿ„ ಪ್ರಶಸ್ತಿ ಸಮಾರಂಭದಲ್ಲಿ ಸಾರ್ವಜನಿಕ ಅಭಿಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

          ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್, ಕರ್ನಾಟಕ ರಾಜ್ಯ  ಅರಣ್ಯ ಸಚಿವ ಈಶ್ವರ ಖಂಡ್ರೆ, ಉಪಸಭಾಪವತಿ ಎಂ.ಕೆ. ಪ್ರಾಣೇಶ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ ಸಹಿತ ಗಣ್ಯರು ಭಾಗವಹಿಸುವ ಕಾರ್ಯಕ್ರಮದಲ್ಲಿ ಈ ಅಭಿನಂದನೆ ನಡೆಯಲಿದೆ.

          ಕೆ.ಕೆ.ಶೆಟ್ಟಿಯವರು ಕಾಸರಗೋಡು ಜಿಲ್ಲೆ ಮತ್ತು ದಕ ಜಿಲ್ಲೆಯಾದ್ಯಂತ ವಿವಿಧ ಧಾರ್ಮಿಕ ಸಾಮಾಜಿಕ ವಿಚಾರಗಳಲ್ಲಿ ಸದಾ ತೊಡಗಿಸಿಕೊಂಡಿರುವುದಲ್ಲದೇ ಕಾಸರಗೋಡು ಜಿಲ್ಲೆಯ ವಿವಿಧ ದೇವಸ್ಥಾನ, ದೈವಸ್ಥಾನಗಳ ಜೀರ್ಣೋದ್ಧಾರಗಳಲ್ಲಿ ಸದಾ ತೊಡಗಿಸಿಕೊಂಡಿದ್ದಲ್ಲದೇ ಮುಂಡಪಳ್ಳ  ಶ್ರೀ ರಾಜರಾಜೇಶ್ವರಿ ಕ್ಷೇತ್ರವನ್ನು ಸಂಪೂರ್ಣ ಪುನರ್ ನಿರ್ಮಾಣದ ಮತ್ತು ಬ್ರಹ್ಮಕಲಶದ ಜವಾಬ್ದಾರಿಯನ್ನು ಹೊಂದಿದ್ದರು. ಇದೀಗ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರಾಗಿದ್ದಾರೆ.  ಇದಲ್ಲದೇ ಅಹಮ್ಮದ್‍ನಗರದ ಶ್ರೀ ಅಯ್ಯಪ್ಪನ್ ದೇವಸ್ಥಾನದ ನಿರ್ಮಾಣ, ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರ ಹೀಗೆ ಆನೇಕ ಕಡೆ ಧಾರ್ಮಿಕ ಕೆಲಸದಲ್ಲಿ  ತೊಡಗಿಸಿಕೊಂಡಿದ್ದಾರೆ. ಕಲೆಗೂ ಪೆÇ್ರೀತ್ಸ್ಸಾಹ ನೀಡುವ ಮೂಲಕ ಯಕ್ಷದ್ರುವ ಪಟ್ಲಾ ಫೌಂಡೇಶನ್‍ನ ಕುಂಬಳೆ ಘಟಕದ ಅಧ್ಯಕ್ಷರಾಗಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries