ಮೆಲ್ಬರ್ನ್: ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ 2035ರ ಒಳಗಾಗಿ ದೇಶದ ಮೊದಲ ಪರಮಾಣು ಸ್ಥಾವರನ್ನು ನಿರ್ಮಿಸುವ ಯೋಜನೆಯನ್ನು ಆಸ್ಟ್ರೇಲಿಯಾದ ಪ್ರಮುಖ ವಿರೋಧ ಪಕ್ಷ ಲಿಬರಲ್ ಪಾರ್ಟಿ ಬುಧವಾರ ಘೋಷಿಸಿದೆ.
ಮೆಲ್ಬರ್ನ್: ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ 2035ರ ಒಳಗಾಗಿ ದೇಶದ ಮೊದಲ ಪರಮಾಣು ಸ್ಥಾವರನ್ನು ನಿರ್ಮಿಸುವ ಯೋಜನೆಯನ್ನು ಆಸ್ಟ್ರೇಲಿಯಾದ ಪ್ರಮುಖ ವಿರೋಧ ಪಕ್ಷ ಲಿಬರಲ್ ಪಾರ್ಟಿ ಬುಧವಾರ ಘೋಷಿಸಿದೆ.
ಸೋಲಾರ್, ಪವನ ಶಕ್ತಿ, ಹಸಿರುಜಲಜನಕ ಸೇರಿದಂತೆ ನವೀಕರಿಸಬಹುದಾದ ಇಂಧನ ಮೂಲಗಳನ್ನು ಆಧಾರವಾಗಿಟ್ಟುಕೊಂಡು ವಾತಾವರಣದಲ್ಲಿ ಇಂಗಾಲದ ಪ್ರಮಾಣ ಕಡಿಮೆ ಮಾಡುವ ಈಗಿನ ಸರ್ಕಾರದ ನೀತಿಗಳು ಕೆಲಸ ಮಾಡದು ಎಂದು ಅದು ಪ್ರತಿಪಾದಿಸಿದೆ.
ವರ್ಷದ ಒಳಗಾಗಿ ಆಸ್ಟ್ರೇಲಿಯಾದಲ್ಲಿ ಚುನಾವಣೆ ನಡೆಯಲಿದ್ದು, ಹಸಿರುಮನೆ ಅನಿಲದ ಹೊರಸೂಸುವಿಕೆಯನ್ನು ಆಸ್ಟ್ರೇಲಿಯಾ ಹೇಗೆ ನಿಯಂತ್ರಿಸಲಿದೆ ಎಂಬ ವಿಚಾರದಲ್ಲಿ ದೇಶದ ಪ್ರಮುಖ ಪಕ್ಷಗಳ ಭಿನ್ನ ನಿಲುವು ಹೊಂದಿರುವುದನ್ನು ಲಿಬಲರ್ ಪಾರ್ಟಿ ನೀತಿಯನ್ನು ಘೋಷಣೆ ತೋರಿಸಿದೆ.
2007ರ ನಂತರ ದೇಶದ ಪಕ್ಷಗಳು ಇಂಗಾಲ ಹೊರಸೂಸುವಿಕೆಗೆ ಕಡಿವಾಣ ಹಾಕುವ ನೀತಿಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿಲ್ಲ.