ಕಾಸರಗೋಡು: ಕುವೈತ್‍ನ ಮಂಗಾಫ್‍ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಸಾವಿಗೀಡಾದ ಕಾಸರಗೋಡು ಚೆರ್ಕಳ ಸನಿಹದ ಕುಂಡಡ್ಕ ನಿವಾಸಿ ರಂಜಿತ್ ಮೃತದೇಹ ಶುಕ್ರವಾರ ರಾತ್ರಿ ಮನೆಗೆ ತಲುಪಿದಾಗ ಶಾಸಕರಾದ ಎನ್.ಎ ನೆಲ್ಲಿಕುನ್ನು, ಸಿ.ಎಚ್ ಕುಞಂಬು, ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಹಾಗೂ ಊರವರು ಪುಷ್ಪಚಕ್ರ ಇರಿಸಿ ನಮನ ಸಲ್ಲಿಸಿದರು. ಮೃತದೇಹ ಕಾಣಲು ನೂರಾರು ಸಂಖ್ಯೆಯಲ್ಲಿ ಜನರು ಮನೆಗೆ ಆಗಮಿಸಿದ್ದರು.