HEALTH TIPS

ಇಂದು ವಿಶ್ವ ಪರಿಸರ ದಿನ: ಪರಿಸರ ಸಂರಕ್ಷಣೆಯಲ್ಲಿ ಮೌನ ಕ್ರಾಂತಿಯಲ್ಲಿ ಕಾಲಡಿ ದಂಪತಿಗಳ ವಿಶಿಷ್ಟ ಮಾದರಿ

              ಕಾಲಡಿ: ಪರಿಸರ ಸಂರಕ್ಷಣೆಯಲ್ಲಿ ವಿಶಿಷ್ಟ ಜೀವನ ಮಾದರಿಯಾಗಿ ಕಾಲಡಿ ಎಸ್. ಮುರಳೀಧರನ್ ಮತ್ತು ಸಹಧರ್ಮಿಣಿ ರಾಧಾ ಗಮನ ಸೆಳೆಯುತ್ತಿದ್ದಾರೆ. ಕಾಲಡಿಯಲ್ಲಿ ಗ್ರಂಥಪಾಲಕರಾಗಿರುವ ದಂಪತಿಗಳು ಕಳೆದ 60 ದಿನಗಳಲ್ಲಿ ತಮ್ಮ ಬೆಳಗಿನ ಚಾಲನೆಯಲ್ಲಿ ಬೀದಿಗಳಿಂದ 6000 ಬಾಟಲಿಗಳು, 7000 ಕ್ಕೂ ಹೆಚ್ಚು ಮುಚ್ಚಳಗಳು ಮತ್ತು 300 ಕ್ಕೂ ಹೆಚ್ಚು ಮದ್ಯದ ಬಾಟಲಿಗಳನ್ನು ಸಂಗ್ರಹಿಸಿರುವರು.

               ಪ್ಲಾಸ್ಟಿಕ್ ಬಾಟಲಿಗಳಿಗಿಂತ ಪ್ಲಾಸ್ಟಿಕ್ ಕ್ಯಾಪ್‍ಗಳು ಪರಿಸರಕ್ಕೆ ಹೆಚ್ಚು ಹಾನಿಕಾರಕವಾಗಿದ್ದು, ನೆಲ ಮತ್ತು ಮಣ್ಣಿನಲ್ಲಿರುವ ನೀರು ಎರಡನ್ನೂ ವಿಷಪೂರಿತಗೊಳಿಸುತ್ತವೆ. ಲಕ್ಷಗಟ್ಟಲೆ ಜೀವಿಗಳು ತಮ್ಮ ಅರಿವಿಲ್ಲದೇ ಸೇವಿಸುವುದರಿಂದ ಅಳಿವಿನಂಚಿಗೆ ಬರುತ್ತಿವೆ ಎಂದೂ ಅವರು ಹೇಳುತ್ತಾರೆ. ಇವುಗಳನ್ನು ಒಂದಷ್ಟು ನಿಯಂತ್ರಿಸಲು ಬೀದಿಗಿಳಿದ ದಂಪತಿಗಳು ಪರಿಸರಕ್ಕಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವುಗಳನ್ನು ಮರುಬಳಕೆ ಮಾಡುವುದರಿಂದ ಹೊಸ ಪ್ಲಾಸ್ಟಿಕ್ ಉತ್ಪಾದನೆ ಕಡಮೆಯಾಗುತ್ತದೆ. ಇವುಗಳ ಮಾರಾಟದಿಂದ ಬರುವ ಹಣವನ್ನು ಕಾಲಡಿ ಎಸ್‍ಎನ್‍ಡಿಪಿ ಗ್ರಂಥಾಲಯದ ವಿಜ್ಞಾನ ಪುಸ್ತಕ ವಿಭಾಗವನ್ನು ವಿಸ್ತರಿಸಲು ಉದ್ದೇಶಿಸಲಾಗಿದೆ.

             ಹೃದಯ ಶಸ್ತ್ರಚಿಕಿತ್ಸೆಯ ನಂತರ ವಿಶ್ರಾಂತಿಯಲ್ಲಿರುವ ಮುರಳೀಧರನ್ ವೈದ್ಯರ ಸೂಚನೆಯಂತೆ ಸಹಧರ್ಮಿಣಿಯೊಂದಿಗೆ ಬೆಳಗಿನ ಸವಾರಿಯನ್ನು ಪ್ರಾರಂಭಿಸಿದರು. ಅವರು ಪರಿಷ್ಕರಿಸಿದ ಘೋಷವಾಕ್ಯ 'ನಮ್ಮ ನಡಿಗೆ ರಾಷ್ಟ್ರದ ಆರೋಗ್ಯಕ್ಕಾಗಿ'. ಮಣ್ಣಿನಿಂದ ಪ್ಲಾಸ್ಟಿಕ್ ಮುಚ್ಚಳಗಳನ್ನು ಸಂಗ್ರಹಿಸಲು ಬಗ್ಗುವುದು ಮತ್ತು ಬಳಿಕ ಮೈ ನೇರಗೊಳಿಸುವುದು ಉತ್ತಮ ವ್ಯಾಯಾಮ ಎಂದು ಅವರು ಹೇಳುತ್ತಾರೆ. ಸಂಗ್ರಹಿಸಿದ ಗಾಜಿನ ಬಾಟಲಿಗಳನ್ನು ತೊಳೆದು ಸ್ವಚ್ಛಗೊಳಿಸುವ ಮೂಲಕ ಮಹಾನ್ ಸಾಧಕರ ವಚನಗಳನ್ನು ಆಸುಪಾಸಿನ ಮಕ್ಕಳ ಸಹಾಯದಿಂದ ಬರೆದು ರಾಧಾ ಚಿತ್ರಗಳೊಂದಿಗೆ ಬಿಡಿಸುವರು. 

            ಸಮೀಪದ ಪ್ರದೇಶಗಳಲ್ಲಿನ ರೆಸಿಡೆನ್ಸ್ ಅಸೋಸಿಯೇಶನ್ ಮತ್ತು ಗ್ರಂಥಾಲಯಗಳ ಸಹಯೋಗದಲ್ಲಿ, ತ್ಯಾಜ್ಯ ಮದ್ಯದ ಬಾಟಲಿಗಳನ್ನು ಮೌಲ್ಯವರ್ಧಿತ ಉತ್ಪನ್ನಗಳಾಗಿ ಪರಿವರ್ತಿಸಲು ಕುಪ್ಪಿವರ ಕುಸೃತಿ(ಬಾಟಲಿಗಳ ಮೂಲಕ ತಮಾಷೆ)ಎಂಬ ಬಾಟಲ್ ಆರ್ಟ್ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ.

           ದಂಪತಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಗ್ರಂಥಪಾಲಕ ಪ್ರಶಸ್ತಿಗಳು ಲಭಿಸಿವೆ. ಮುರಳೀಧರನ್, ಕಾಲಡಿ ಎಸ್‍ಎನ್‍ಡಿಪಿ ಗ್ರಂಥಾಲಯದ ಕಾರ್ಯದರ್ಶಿ. ರಾಧಾ ಕಾಲಡಿ ಗ್ರಾಮ ಪಂಚಾಯತ್ ನ ಗ್ರಂಥಪಾಲಕಿ. ಅವರ ಮಕ್ಕಳಾದ ಅಂಬಾಡಿಕಣ್ಣನ್ ಮತ್ತು ಅರೋಮಲುಣ್ಣಿ ಅವರ ಬೆಂಬಲದೊಂದಿಗೆ ಈ ಸಾಧಕ ಕೆಲಸ ಮಾಡುತ್ತಿದ್ದಾರೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸುವ ಒಳ್ಳೆಯ ಕೆಲಸ ಸಮಾಜದ ಕಟ್ಟಕಡೆಯ ವ್ಯಕ್ತಿಗಳು ಮಾತ್ರ ಮಾಡಬೇಕಾದುದಲ್ಲ, ದೇವರ ಸ್ವಂತ ನಾಡು ಎಂದು ಹೆಮ್ಮೆ ಪಡುವ ಕೇರಳದ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಈ ದಂಪತಿಗಳು ಪ್ರತಿಪಾದಿಸುತ್ತಾರೆ. ಈ ಅನುಕರಣೀಯ ದಂಪತಿಗಳು ತಮ್ಮ ಜೀವನದ ಮೂಲಕ ಶ್ರೀ ನಾರಾಯಣ ಗುರುಗಳ ವಚನಗಳನ್ನು ಸಾಕಾರಗೊಳಿಸುತ್ತಿದ್ದಾರೆ ಎನ್ನಲು ಅಡ್ಡಿಯಿಲ್ಲ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries