HEALTH TIPS

ಈ ರೀತಿ ಆಗುವುದು ಖಂಡಿತ ಲೋ ಬಿಪಿಯ ಲಕ್ಷಣ..! ಯಾವುದೆಲ್ಲಾ ಗೊತ್ತಾ?

 ತ್ತೀಚಿಗಿನ ಒತ್ತಡದ ಜೀವನ ಬಿಡುವಿಲ್ಲದ ಕೆಲಸದಲ್ಲಿ ಜನರು ಹೈ ಬಿಪಿ ಹಾಗೂ ಲೋ ಬಿಪಿಯಂತಹ ಸಮಸ್ಯೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಒಮ್ಮೆ ನೀವು ರಕ್ತದೊತ್ತಡದ ಸಮಸ್ಯೆಗೆ ಒಳಗಾದರೆ ಅದನ್ನು ವಾಸಿ ಮಾಡಲಾಗದು ಎಂಬುದು ನಿಗೆ ತಿಳಿದಿದೆ.

ಅದನ್ನು ಹಂತ ಹಂತವಾಗಿ ನಿಯಂತ್ರಣ ಮಾಡಬಹುದು.

ಆದರೆ ನಾವು ಹೈ ಬಿಪಿ ಹಾಗೂ ಲೋ ಬಿಪಿ ಒಳಗಾಗುತ್ತಿದ್ದರೂ ನಮಗೆ ಅದರ ಎರಡರ ನಡುವಿನ ವ್ಯತ್ಯಾಸ ಗುರುತಿಸುವಲ್ಲಿ ವಿಫಲರಾಗುತ್ತಿದ್ದೇವೆ. ನಮಗೆ ಈ ಎರಡರ ನಡುವಿನ ವ್ಯತ್ಯಾಸ ಹಾಗೂ ಲಕ್ಷಣಗಳು ತಿಳಿಯುವುದು ಬಹಳ ಕಷ್ಟವಾಗುತ್ತಿದೆ. ಅದರಲ್ಲೂ ಲೋ ಬಿಪಿ ಕುರಿತಂತೆ ನಮ್ಮಲ್ಲಿ ಬಹಳಷ್ಟು ತಪ್ಪು ಕಲ್ಪನೆಗಳು ಹಾಗೂ ಅರಿವಿನ ಕೊರತೆ ಇದೆ.

ಹಾಗಾದ್ರೆ ಈ ಲೋ ಬಿಪಿ ಉಂಟಾಗುವುದು ಏಕೆ? ಇದರ ಲಕ್ಷಣವೇನು? ನಮಗೆ ಲೋ ಬಿಪಿ ಇರುವುದು ತಿಳಿಯುವುದಾದರು ಹೇಗೆ? ಏನಿದರ ಪರಿಣಾಮ ಎಂಬ ಎಲ್ಲಾ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿಯ ರಕ್ತದೊತ್ತಡ ಪ್ರತಿ ನಿಮಿಷಕ್ಕೆ 119/70 ಎಂಎಂ ಹಾಗೂ ಮಹಿಳೆಯರಲ್ಲಿ 110/68 ಇರಬೇಕಾಗುತ್ತದೆ. ಹೀಗಿದ್ದಾಗ ನಾವು ಆರೋಗ್ಯವಂತರ ರಕ್ತದೊತ್ತಡ ಎಂದು ಪರಿಗಣಿಸಲಾಗುತ್ತದೆ. ಆದರೆ ಇದಕ್ಕಿಂತಲೂ ಹೆಚ್ಚಾದರೆ ಅಧಿಕ ರಕ್ತದೊತ್ತಡ ಕಾಣಿಸಿಕೊಳ್ಳುತ್ತೆ. ಹಾಗೂ ಕಡಿಮೆಯಾದರೆ ಲೋ ಬಿಪಿ ಕಂಡುಬರಲಿದೆ. ಲೋ ಬಿಪಿಯಲ್ಲಿ ನಿಮಗೆ ಗೋಚರ ಆಗುವ ಲಕ್ಷಣಗಳಿರುತ್ತವೆ. ಅದರಲ್ಲಿ ಕೆಲವೊಂದನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

ಮೂರ್ಛೆ: ಲೋ ಬಿಪಿಯ ಪ್ರಮುಖ ಲಕ್ಷಣವೆಂದರೆ ಮೂರ್ಚೆ ಹೋಗುವುದು. ಮೆದುಳಿಗೆ ರಕ್ತ ಪರಿಚಲನೆ ಕಡಿಮೆಯಾದಾಗ ಈ ಸಮಸ್ಯೆ ಎದುರಾಗುತ್ತದೆ. ಆದರೆ ಯಾವಾಗಲೂ ಮೂರ್ಚೆ ಹೋಗುವುದು ಲೋ ಬಿಪಿಯ ಲಕ್ಷಣ ಆಗಿರದೆ ಇರಬಹುದು. ಆದರೆ ಮೂರ್ಚೆ ಹೋಗುವ ಮುನ್ನ ಬೆವರುವುದು, ಉಸಿರಾಡಲು ಸಮಸ್ಯೆಯಾಗುವ ಲಕ್ಷಣ ಕಂಡುಬರಬಹುದು.

ಉಸಿರಾಟದ ಸಮಸ್ಯೆ: ಹೈಪರ್ ಟೆನ್ಷನ್ ಉಸಿರಾಟದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ದೇಹದಲ್ಲಿನ ಬಿಪಿಯನ್ನು ಸರಿದೂಗಿಸಲು ಆಮ್ಲಜನಕದ ಪೂರೈಕೆಯನ್ನು ಸುಧಾರಿಸಲು ಉಸಿರಾಟದ ಪ್ರಮಾಣವನ್ನು ಹೆಚ್ಚಿಸುತ್ತದೆ. ಹೀಗಾಗಿ ನೀವು ಉಸಿರಾಟದ ಸಮಸ್ಯೆಗೆ ಒಳಗಾಗಬಹುದು.

ಆಯಾಸ: ಲೋ ಬಿಪಿ ಇರುವವರಿಗೆ ಯಾವಾಗಲು ಆಯಾಸವಾಗುವ ಅನುಭವವಾಗುತ್ತದೆ. ಇದು ಸಹ ರಕ್ತ ಪರಿಚಲನೆಯ ಪರಿಣಾಮದಿಂದ ಸಂಭವಿಸುತ್ತದೆ. ನಡೆದಾಡಲು ಆಗದೆ ಇರುವುದು. ಬಹುಬೇಗ ಸುಸ್ತು ಕಾಣಿಸಿಕೊಳ್ಳುವುದು ಕಂಡುಬರುತ್ತದೆ.

ತಲೆ ತಿರುಗುವುದು: ಲೋ ಬಿಪಿ ಇರುವವರು ಹೆಚ್ಚು ಹೊತ್ತು ಕೆಲಸ ಮಾಡಿದಾಗ, ಓಡಾಡುವಾಗ ಅವರಿಗೆ ತಲೆ ಸುತ್ತು ಬರುವುದು. ಏಕಾಏಕಿ ಕುಸಿದು ಬೀಳುವಂತೆ ಆಗುವುದು. ಸುಸ್ತು ಸಹ ಕಾಣಿಸಿಕೊಳ್ಳುವುದು ಕಂಡುಬರುತ್ತದೆ. ಮೆದುಳು ಸಾಕಷ್ಟು ರಕ್ತವನ್ನು ತ್ವರಿತವಾಗಿ ಸ್ವೀಕರಿಸದಿದ್ದಾಗ ಈ ಲಕ್ಷಣಗಳು ಕಂಡುಬರುತ್ತವೆ. ಹಾಗೆಯೇ ಕೈ ಕಾಲು ನಡುಗುವ ಲಕ್ಷಣ ಸಹ ನಿಮ್ಮಲ್ಲಿ ಕಂಡುಬರಬಹುದು.

ಲೋ ಬಿಪಿ ಎನ್ನುವುದು ಏಕಾಏಕಿ ನಿಮ್ಮಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅದರಲ್ಲೂ ನಿಮಗೆ ಉಂಟಾಗುವ ಹಲವು ಸಮಸ್ಯೆಗಳು ಈ ಲೋ ಬಿಪಿಗೆ ಸುಲಭದ ದಾರಿ ಮಾಡಿಕೊಡುತ್ತವೆ. ಹೃದಯ ಸಂಬಂಧಿ ಕಾಯಿಲೆ, ಮಧುಮೇಹ, ರಕ್ತಸ್ರಾವ ಹೀಗೆ ಹಲವು ಕಾರಣವಾಗಬಹುದು. ಅತೀಯಾದ ಒತ್ತಡ, ಗೊಂದಲ, ಭಯ ಹೀಗೆ ನಾನಾ ಕಾರಣ ಹೈ ಬಿಪಿಯ ಜೊತೆಗೆ ಲೋ ಬಿಪಿಗೂ ಕಾರಣವಾಗುತ್ತದೆ. ವ್ಯಕ್ತಿಯು ಹಠಾತ್ ಆಘಾತವನ್ನು ಅನುಭವಿಸಿದಾಗ ಇದು ಸಂಭವಿಸುತ್ತದೆ. ದೇಹದ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಾಕಷ್ಟು ರಕ್ತ ಮತ್ತು ಆಮ್ಲಜನಕವನ್ನು ಪಡೆಯದಿದ್ದಾಗ ಇದು ಸಂಭವಿಸುತ್ತದೆ ಎಂಬುದಷ್ಟೇ ನಮಗೆ ತಿಳಿದಿರುತ್ತದೆ. ಆದರೆ ಲೋ ಬಿಪಿಯ ಹಿಂದೆ ಈ ರೀತಿ ಹಲವು ಕಾರಣಗಳಿವೆ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries