HEALTH TIPS

ಕುಂಟಾಲಮೂಲೆ ಚಿರಂಜೀವಿ ಯಕ್ಷಗಾನ ಕಲಾಸಂಘದ ಬದಿಯಡ್ಕ ಘಟಕದ ಉದ್ಘಾಟನೆ

            ಬದಿಯಡ್ಕ: ಚಿರಂಜೀವಿ ಯಕ್ಷಗಾನ ಕಲಾಸಂಘ ಕುಂಟಾಲುಮೂಲೆ ಇದರ 6ನೇ ವರ್ಷಕ್ಕೆ ಪಾದರ್ಪಣೆಗೆಯ್ಯುತ್ತಿರುವ ಸಂದರ್ಭದಲ್ಲಿ  ಬದಿಯಡ್ಕ ಘಟಕದ ಉದ್ಘಾಟನಾ ಸಮಾರಂಭ ಹಾಗೂ ಯಕ್ಷಗಾನ ನಾಟ್ಯ ತರಬೇತಿಯು ಮೂಕಂಪಾರೆಯ ಜೋಗಿ ಸಮಾಜ ಭವನದಲ್ಲಿ ನಡೆಯಿತು. 

           ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಕೊಲ್ಲಂಗಾನದ ತಂತ್ರಿ ಗಣಾಧಿರಾಜ ಉಪಾಧ್ಯಾಯ ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಯಕ್ಷಗಾನವು ಕಾಸರಗೋಡಿನ ಕಲೆ ಅದನ್ನು ಮುಂದಿನ ತಲೆಮಾರಿಗೆ ತಲುಪಿಸಬೇಕಾದರೆ ಸಣ್ಣ ಮಕ್ಕಳಿಗೆ ಕಲಿಸಿ ಪ್ರೋತ್ಸಾಹಿಸಬೇಕಾಗಿದೆ. ಕರ್ನಾಟಕ ಸರ್ಕಾರದ ಜಾನಪದ ಪ್ರಶಸ್ತಿ ಪುರಸ್ಕøತ ಯಕ್ಷಗುರು ಜಯರಾಮ ಪಾಟಾಳಿ ಪಡುಮಲೆ ನಿರಂತರ ಯಕ್ಷಗಾನದಲ್ಲಿ ತೊಡಗಿಸಿಕೊಂಡು ಹಲವು ಕಾರ್ಯಕ್ರಮಗಳನ್ನು ಮಾಡುತ್ತಿರುವರು. ಸಾವಿರಾರು ಶಿಷ್ಯರನ್ನು ಹೊಂದಿದವರು. ಚಿರಂಜೀವಿ ಯಕ್ಷಗಾನ ಕಲಾ ಸಂಘದ ಅಂಥಹ ಸಂಘಟನೆಯು ಪುಟಾಣಿ ಮಕ್ಕಳಿಗೆ ಮತ್ತು ಬದಿಯಡ್ಕ ದಲ್ಲಿ ಒಂದು ಅವಕಾಶವನ್ನು ತೆರೆದಿಟ್ಟಿದೆ. ಇದನ್ನು ಸದುಪಯೋಗ ಪಡಿಸಬೇಕು. ಯಕ್ಷಗಾನ ಬೆಳೆಸಬೇಕು ಅದರಿಂದ ನಮ್ಮ ಸಂಸ್ಕೃತಿ ಪುರಾಣ ಕಥೆಗಳು ಎಲ್ಲವೂ ಮುಂದಿನ ಮಕ್ಕಳಿಗೆ ತಿಳಿಯುವಂತಾಗಬೇಕು ಎಂದರು.

           ಕಾಸರಗೋಡು ಜಿಲ್ಲಾ ಜೋಗಿ ಸಮಾಜ ಸುಧಾರಕರ ಸಂಘದ ಅಧ್ಯಕ್ಷ ಗೋಪಾಲ ಕೆ ಮಂಜೇಶ್ವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಲ್ಲ ಮೇಳದ ಪ್ರಬಂಧಕರಾದ ಮುಕುಂದರಾಜ್ ಮಲ್ಲ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಈ ಸಂದರ್ಭದಲ್ಲಿ  ಕಾಸರಗೋಡು ಜಿಲ್ಲಾ ಜೋಗಿ ಸಮಾಜ ಸುಧಾರಕರ ಸಂಘದ ಗೌರವ ಕಾರ್ಯದರ್ಶಿ ಭಾಸ್ಕರ ಮಾಸ್ಟರ್,  ಧರ್ಮಸ್ಥಳ ಜನ ಜಾಗೃತಿ ವೇದಿಕೆ ಕಾಸರಗೋಡು ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ, ಉಪ್ಲೇರಿ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಶುಭಾಶಂಸನೆಗೆಯ್ದರು. ಚಿರಂಜೀವಿ ಯಕ್ಷಗಾನ ಕಲಾಸಂಘದ ಸದಸ್ಯರಾದ ರವೀಶ್ ಕುಂಟಾಲುಮೂಲೆ ಸ್ವಾಗತಿಸಿ, ಗೋಪಾಲಕೃಷ್ಣ ಕಾರೆಕ್ಕಾಡ್ ಧನ್ಯವಾದ ಹಾಗೂ ಕಾರ್ಯಕ್ರಮ ನಿರೂಪಿಸಿದರು.


   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries