ಕೋಟಾ: ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್‌ಗೆ ಹೆಸರಾದ ರಾಜಸ್ಥಾನದ ಕೋಟಾದಿಂದ ನಾಪತ್ತೆಯಾಗಿದ್ದ ನೀಟ್ ಆಕಾಂಕ್ಷಿ ಬಾಲಕಿಯೊಬ್ಬಳು ಚೆನ್ನೈನಲ್ಲಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಕೋಟಾ: ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್‌ಗೆ ಹೆಸರಾದ ರಾಜಸ್ಥಾನದ ಕೋಟಾದಿಂದ ನಾಪತ್ತೆಯಾಗಿದ್ದ ನೀಟ್ ಆಕಾಂಕ್ಷಿ ಬಾಲಕಿಯೊಬ್ಬಳು ಚೆನ್ನೈನಲ್ಲಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
15 ವರ್ಷದ ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ, ಆಕೆಗೆ ಕೌನ್ಸಿಲಿಂಗ್ ನಡೆಸಲಾಯಿತು.
ನಗರದ ಕೋಚಿಂಗ್ ಕೇಂದ್ರವೊಂದರಲ್ಲಿ ನೀಟ್ ತರಬೇತಿ ಪಡೆಯುತ್ತಿದ್ದ ಬಾಲಕಿಯು, ಜೂನ್ 10ರಂದು ತರಗತಿಗೆ ತೆರಳಲು ಹಾಸ್ಟೆಲ್ ಬಿಟ್ಟಿದ್ದಳು. ನಂತರ ಹಾಸ್ಟೆಲ್‌ಗೆ ವಾಪಸ್ಸಾಗಿರಲಿಲ್ಲ. ಆಕೆ ಸೂರತ್ ಮತ್ತು ಮುಂಬೈ ಮೂಲಕ ಕೋಟಾದಿಂದ ಚೆನ್ನೈಗೆ ಪ್ರಯಾಣಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಇದಕ್ಕೆ ಕಾರಣವೇನು ಎನ್ನುವುದನ್ನು ಪೊಲೀಸರು ಬಹಿರಂಗಪಡಿಸಿಲ್ಲ.