ಕಾಸರಗೋಡು: ಓದಿನಿಂದ ವಿಮುಖರಾಗುವುದು ಬೌದ್ಧಿಕ ವಿಕಾಸ ಕುಂಠಿತಗೊಳ್ಳಲು ಕಾರಣವಾಗಲಿದ್ದು, ಹೊಸ ಪೀಳಿಗೆ ಓದುವ ಹವ್ಯಾಸ ಬೆಳೆಸಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಲು ಪಣತೊಡಬೇಕು ಎಂದು ಕಾಸರಗೋಡು ಪ್ರೆಸ್‍ಕ್ಲಬ್ ಉಪಾಧ್ಯಕ್ಷ, ಪತ್ರಕರ್ತ ನಹಾಸ್ ಪಿ.ಮಹಮ್ಮದ್ ತಿಳಿಸಿದ್ದಾರೆ.
ವಿದ್ಯಾನಗರ ಜವಾಹರಲಾಲ್ ಸಾರ್ವಜನಿಕ ಗ್ರಂಥಾಲಯದಲ್ಲಿ ವಾಚನಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು. ಜವಾಹರಲಾಲ್ ಸಾರ್ವಜನಿಕ ಗ್ರಂಥಾಲಯದ ಅಧ್ಯಕ್ಷ ಎಂ.ಪದ್ಮಾಕ್ಷನ್ ಅಧ್ಯಕ್ಷತೆ ವಹಿಸಿ ಪಿ.ಎನ್.ಪಣಿಕ್ಕರ್ ಸಂಸ್ಮರಣಾ ಭಾಷಣ ಮಾಡಿದರು.
ಖ್ಯಾತ ಲೇಖಕಿ ಹಾಗೂ ಕವಯತ್ರಿ ಎಂ.ಎ.ಮುಮ್ತಾಜ್ ಅವರು 'ಓದುವ ಜಗತ್ತು' ವಿಷಯದ ಕುರಿತು ಮುಖ್ಯ ಭಾಷಣ ಮಾಡಿದರು. ತಂತ್ರಜ್ಞಾನದ ಅತಿಯಾದ ಬಳಕೆಯ ಹೊರತಾಗಿಯೂ ನಿರಂತರವಾಗಿ ಓದುವುದನ್ನು ಮುಂದುವರಿಸುವುದರಿಂದ ಜೀವನದಲ್ಲಿ ಉನ್ನತ ಸಂಸ್ಕøತಿ ಮತ್ತು ಒಳಿತನ್ನು ಕಾಣಲು ಸಾಧ್ಯವಾಗಲಿದೆ ಎಂದು ತಿಳಿಸಿದರು. ಹೌಸಿಂಗ್ ಬೋರ್ಡ್ ಫ್ಲಾಟ್ ಹಂಚಿಕೆದಾರರ ಸಂಘದ ಮಾಜಿ ಅಧ್ಯಕ್ಷ ಕೆ.ಕೃಷ್ಣನ್ ನಾಯರ್ ಉಪಸ್ಥಿತರಿದ್ದರು. ಜವಾಹರಲಾಲ್ ಸಾರ್ವಜನಿಕ ಗ್ರಂಥಾಲಯ ಕಾರ್ಯದರ್ಶಿ ಡಾ.ಎ.ಎನ್. ಮನೋಹರನ್ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಎ.ದಿವಾಕರನ್ ವಂದಿಸಿದರು.