ಕಾಸರಗೋಡು: ಲೋಕಸಭೆ ಚುನಾವಣೆಯಲ್ಲಿ ಖಚಿತ ಸ್ಥಾನ ಎಂದು ಭಾವಿಸಲಾಗಿದ್ದ ಕಾಸರಗೋಡು ಈ ಬಾರಿಯೂ ಎಡರಂಗದಿಂದ ಕೈತಪ್ಪಿದೆ. ರಾಜ್ಯದಲ್ಲಿ ಯುಡಿಎಫ್ ಅಲೆ ಇದ್ದರೂ ಕಾಸರಗೋಡು ಕ್ಷೇತ್ರ ಎಡಪಕ್ಷಕ್ಕೆ ಬೆಂಬಲ ನೀಡುತ್ತದೆ ಎಂಬ ನಿರೀಕ್ಷೆಯಲ್ಲಿ ಮುಖಂಡರು ಇದ್ದರು. ಆದರೆ ಮತ ಎಣಿಕೆ ಆರಂಭಗೊಂಡ ಕೆಲವೇ ಗಂಟೆಗಳಲ್ಲಿ ಕಾಸರಗೋಡಿನ ಚಿತ್ರಣ ಸ್ಪಷ್ಟವಾಯಿತು. ಸತತ ಎರಡನೇ ಬಾರಿಗೆ ಎಲ್‍ಡಿಎಫ್‍ಗೆ ಹೀನಾಯ ಸೋಲು ಅನುಭವಿಸಿದ್ದು, ಯುಡಿಎಫ್ ಅಭ್ಯರ್ಥಿ ರಾಜ್‍ಮೋಹನ್ ಉಣ್ಣಿತ್ತಾನ್ ಜಯಗಳಿಸಿದ್ದಾರೆ. ಈವರೆಗಿನ ವರದಿಯಂತೆ ಉಣ್ಣಿತ್ತಾನ್ 474957 ಮತಗಳಿಸಿದ್ದಾರೆ.
ಸಿಪಿಎಂ ಜಿಲ್ಲಾ ಕಾರ್ಯದರ್ಶಿಯಾಗಿದ್ದ ಎಂ.ವಿ.ಬಾಲಕೃಷ್ಣನ್ ಮಾಸ್ತರ್ ಅವರು ಎಡಪಕ್ಷಗಳ ಭದ್ರಕೋಟೆಯಾಗಿರುವ ಕಣ್ಣೂರು ಜಿಲ್ಲೆಯ ಭಾಗವಾಗಿರುವ ಪಯ್ಯನ್ನೂರು, ಕಲ್ಯಶ್ಶೇರಿ, ತ್ರಿಕರಿಪುರದಲ್ಲಿ ಮತಗಳನ್ನು ಪಡೆದರೂ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಭ್ಯರ್ಥಿ ಆಯ್ಕೆಯಲ್ಲಿನ ಲೋಪವೇ ಕಾಸರಗೋಡು ಕೈತಪ್ಪಲು ಕಾರಣ ಎಂಬ ಟೀಕೆ ಮೊದಲಿನಿಂದಲೂ ಕೇಳಿ ಬರುತ್ತಿದೆ. ಕಲ್ಯಾಶೆರಿ ಮಾಜಿ ಶಾಸಕ ಹಾಗೂ ಸಿಪಿಎಂ ರಾಜ್ಯ ಸಮಿತಿ ಸದಸ್ಯ ಟಿ.ವಿ.ರಾಜೇಶ್ ಅಥವಾ ಡಾ. ವಿಪಿಪಿ ಮುಸ್ತಫಾ ಅವರನ್ನು ನಾಮನಿರ್ದೇಶನ ಮಾಡಿದ್ದರೆ ಯುಡಿಎಫ್‍ಗೆ ಇಷ್ಟು ಸುಲಭದ ಜಯ ಲಭಿಸುತ್ತಿರಲಿಲ್ಲ ಎಂದು ಭಾವಿಸಿದವರು ಬಹಳಷ್ಟು ಮಂದಿ ಇದ್ದಾರೆ. ಅವರು 371930 ಮತ ಈವರೆಗೆ ಗಳಿಸಿದ್ದಾರೆ.
ಎನ್.ಡಿ.ಎ.ಅಭ್ಯರ್ಥಿ ಎಂ.ಎಲ್.ಅಶ್ವಿನಿ ಅವರು 212115 ಮತಗಳನ್ನು ಈವರೆಗೆ ಗಳಿಸಿದ್ದು, ಎಣಿಕೆ ಪ್ರಕ್ರಿಯೆ ಮುಂದುವರಿದಿದೆ.