ಬದಿಯಡ್ಕ: ವಾಂತಿಚ್ಚಾಲು ಉಪ್ಲೇರಿ ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಯಲ್ಲಿ ಮಿಥುನ ಸಂಕ್ರಮಣದ ವಿಶೇಷ ತಂಬಿಲ ದಿನದಂದು ಸೇವಾಟ್ರಸ್ಟ್‍ನ ಅಧ್ಯಕ್ಷ ಕೊಡುಗೈ ದಾನಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಇವರ ಜನ್ಮದಿನದ ಪ್ರಯುಕ್ತ ಕ್ಷೀರಾಭಿಷೇಕ, ಸೀಯಾಳಾಭಿಷೇಕ, ತಂಬಿಲಸೇವೆ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಟ್ರಸ್ಟ್‍ನ ನಿರ್ದೇಶಕ ಜಗನ್ನಾಥ ರೈ ಕೊರೆಕ್ಕಾನ ಅಧ್ಯಕ್ಷತೆ ವಹಿಸಿದ್ದರು. ಮುಗು ಸೇವಾಸಹಕಾರಿ ಬ್ಯಾಂಕ್ ಮಾಜಿ ಅಧ್ಯಕ್ಷ ನಾರಾಯಣ ಎಸ್. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಪುಸ್ತಕ ವಿತರಣೆ, ರ್ಯಾಂಕ್ ವಿಜೇತೆ ದೀಪ್ನಾ ಜೆ ಮುಂಡಿತ್ತಡ್ಕ, ಸ್ಥಳೀಯ 7 ಮಂದಿ ಯಕ್ಷಗಾನ ಬಾಲಪ್ರತಿಭೆಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ನಾರಾಯಣ ನಾಯ್ಕ ಬದಿಯಡ್ಕ ಇವರಿಗೆ ಧನಸಹಾಯ ಹಾಗೂ ಬಡತನದಲ್ಲಿರುವವರಿಗೆ ಔಷಧಿಗಾಗಿ ಧನಸಹಾಯ ಮಾಡಲಾಯಿತು.
ಚೆನ್ನಿಕುಡೇಲು ನಾಗಬ್ರಹ್ಮ ಮಲರಾಯಿ ಸನ್ನಿಧಿಯ ಕೋಶಾಧಿಕಾರಿ ಸುಂದರ ಕಟ್ನಡ್ಕ, ಕೊರಗಪ್ಪ ಕುಲಾಲ್ ಪಾಲ್ತಿಮಾರು, ಕೃಷ್ಣ ಬೆಳ್ಚಪ್ಪಾಡ ಉಪ್ಲೇರಿ, ರಾಮನಾಯ್ಕ ಕುಂಟಾಲುಮೂಲೆ, ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು, ಶಿವರಾಮ ಸಾಲ್ಯಾನ್, ರಮೇಶ್ ಕುಲಾಲ್ ನಾಯ್ಕಾಪು, ಸುಕುಮಾರ ಉಪ್ಲೇರಿ, ಆನಂದ ಬೈಕ್ಕುಂಜ ಉಪಸ್ಥಿತರಿದ್ದರು.