HEALTH TIPS

ಮೈಗ್ರೇನ್ ಕಾಣಿಸಿಕೊಂಡಾಗ ನೋವನ್ನು ಕಡಿಮೆ ಮಾಡಲು ಒಂದಷ್ಟು ಸಲಹೆಗಳು..

 ಲೆನೋವು ಆಗಾಗ್ಗೆ ಕಾಡುತ್ತಲೇ ಇರುತ್ತದೆ. ಅದರಲ್ಲು ಮೈಗ್ರೇನ್ ಇದ್ದರಂತೂ ಅಂಥವರು ನೆಮ್ಮದಿಯಾಗಿರಲು ಸಾಧ್ಯವಿಲ್ಲ. ಬದುಕಿನ ನೆಮ್ಮದಿಯನ್ನೇ ಕೆಡಿಸಿಬಿಡುತ್ತದೆ. ಹೀಗಾಗಿ ಮೈಗ್ರೇನ್ ಕಾಣಿಸಿಕೊಂಡಾಗ ನೋವನ್ನು ಕೆಲವೊಂದು ಕ್ರಮಗಳಿಂದ ನೋವನ್ನು ನಿವಾರಣೆ ಮಾಡಲು ಸಾಧ್ಯವಿದೆ.

ತೀವ್ರ ತಲೆನೋವು ಕಾಣಿಸಿಕೊಂಡಾಗ ಕೋಲ್ಡ್ ಪ್ಯಾಕ್ ಅಥವಾ ಐಸ್ ಚೀಲವನ್ನು ಸುತ್ತಿ ಅದನ್ನು ಹತ್ತು ನಿಮಿಷಗಳ ಕಾಲ ನೋವು ಇರುವ ಜಾಗದ ಮೇಲೆ ಅಥವಾ ಕತ್ತಿನ ಹಿಂಭಾಗ ಇರಿಸಬೇಕು. ಕಣ್ಣನ್ನು ನೇರ ಬೆಳಕಿಗೆ ಒಡ್ಡದೆ, ಕತ್ತಲೆ ಕೋಣೆ, ಶಾಂತವಾದ ಸ್ಥಳದಲ್ಲಿ ಮಲಗಬೇಕು. ದ್ರವ ಪದಾರ್ಥವನ್ನು ಹೆಚ್ಚು ಸೇವಿಸಬೇಕು, ವಾಕರಿಕೆ ತಡೆಗೆ ಫ್ಲಾಟ್ ಸೋಡಾವನ್ನು ಸೇವಿಸಬೇಕು.

ತೋರು ಬೆರಳು ಮತ್ತು ಹೆಬ್ಬೆರಳಿನಿಂದ ನೋವಿರುವ ಜಾಗಕ್ಕೆ ವೃತ್ತಾಕಾರದಲ್ಲಿ ಒತ್ತಡ ಹಾಕಬೇಕು. ಹೀಗೆ ಒತ್ತಡವನ್ನು ಸುಮಾರು 7ರಿಂದ15ಸೆಕೆಂಡುಗಳ ಕಾಲ ಹಾಕಿ ಮತ್ತೆ ಬಿಡಬೇಕು. ಇದೇ ರೀತಿ ಮತ್ತೆ, ಮತ್ತೆ ಮಾಡಬೇಕು. ಇದರೊಂದಿಗೆ ತಲೆ ಚಿಪ್ಪನ್ನು ಮೃದುವಾದ ಹೇರ್‌ ಬ್ರೆಷ್‌ನಿಂದ ಬ್ರೆಷ್ ಮಾಡುವುದರಿಂದಲೂ ನೋವು ಶಮನ ಮಾಡಲು ಸಾಧ್ಯವಾಗುತ್ತದೆ.

ಮೈಗ್ರೇನ್‌ಗೆ ಪ್ರಚೋದನೆ ನೀಡುವ ಬೆಳಕಿನಂತಹ ಸಂವೇದನೆಯ ಉದ್ದೀಪಕ, ಆಹಾರ ಮತ್ತು ಆಹಾರದ ಎಡಿಟಿವ್‌ ಗಳು, ಪೇಯ, ಮಾನಸಿಕ ಒತ್ತಡ, ಸ್ತ್ರೀಯರಲ್ಲಿ ಹಾರ್ಮೋನ್ ಬದಲಾವಣೆಗಳು, ಏಳುವ-ಮಲಗುವ ವಿಧಾನಗಳಲ್ಲಿನ ಬದಲಾವಣೆಗಳು, ಶಾರೀರಿಕ ಅಂಶಗಳು, ಪರಿಸರದಲ್ಲಿನ ಬದಲಾವಣೆಗಳು, ಔಷಧಗಳು ಹೀಗೆ ಹಲವು ಅಂಶಗಳನ್ನು ವೈದ್ಯರು ಗುರುತಿಸಿದ್ದು, ಇವು ಮೈಗ್ರೇನ್ ಹೆಚ್ಚಿಸುವಲ್ಲಿ ಪಾತ್ರವಹಿಸುತ್ತವೆ. ಇವು ಬಾಹ್ಯವಾಗಿ ಅಥವಾ ಶಾರೀರಿಕವಾಗಿ ಮೈಗ್ರೇನ್ ಕಾಣಿಸಿಕೊಳ್ಳಲು ಸಹಕರಿಸುವ ಸಾಧ್ಯತೆಯಿರುವುದರಿಂದ ಎಚ್ಚರವಾಗಿರಬೇಕು.

ಮೈಗ್ರೇನ್ ಕಾಣಿಸಿಕೊಳ್ಳಲು ಕಾರಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು. ವ್ಯಕ್ತಿಯ ಜೀವನ ಶೈಲಿ, ಆತ ಮಾಡುತ್ತಿರುವ ಕೆಲಸಗಳು, ಸುತ್ತಲಿನ ವಾತಾವರಣ ಎಲ್ಲವೂ ಗಣನೆಗೆ ಬರುತ್ತದೆ. ಮೈಗ್ರೇನ್ ಪೀಡಿತರು ಒಂದು ಡೈರಿಯನ್ನು ಉಪಯೋಗಿಸಬೇಕು ಮತ್ತು ಅದರಲ್ಲಿ ತಲೆನೋವಿನ ತೀವ್ರತೆ, ಅದು ಇದ್ದ ಕಾಲಾವಧಿ, ತಲೆನೋವು ಕಾಣಿಸಿಕೊಂಡಾಗ ಶರೀರದಲ್ಲಿನ ಇನ್ನಿತರ ಲಕ್ಷಣಗಳು, ವೈದ್ಯರು ಶಿಫಾರಸ್ಸು ಮಾಡಿದ ಔಷಧಿಯನ್ನು ತೆಗೆದುಕೊಂಡ ವಿವರಗಳನ್ನು ನಮೂದಿಸಬೇಕು. ಹೀಗೆ ಸುಮಾರು ಎಂಟು ವಾರಗಳ ಕಾಲ ಡೈರಿಯನ್ನು ನಿರ್ವಹಿಸುತ್ತಾ ಬಂದರೆ, ಮೈಗ್ರೇನ್‌ನ ನಿರ್ಧಿಷ್ಟ ವಿಧಾನ ತಿಳಿದುಕೊಂಡು ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ ಎಂಬುದು ವೈದ್ಯರ ಸಲಹೆಯಾಗಿದೆ.

ಇನ್ನು ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ದೆಮಾಡುವುದು, ನಿಯಮಿತ ಆಹಾರ ಸೇವನೆ ಮಾಡುವುದು, ಪ್ರಕಾಶಮಾನ ಬೆಳಕು ಹಾಗೂ ದಟ್ಟವಾದ ಸುವಾಸನೆಯಿಂದ ದೂರವಿರುವುದು, ಧೂಮಪಾನ ತ್ಯಜಿಸುವುದು, ಆದಷ್ಟು ಮಾನಸಿಕ ಒತ್ತಡವಾಗದಂತೆ ಎಚ್ಚರವಹಿಸುವುದು, ಮೈಗ್ರೇನ್ ಪ್ರಚೋದಿಸುವಂತಹ ಆಹಾರ ಪದಾರ್ಥಗಳನ್ನು ದೂರವಿಡುವುದು. ವೈದ್ಯರು ನೀಡುವ ಔಷಧಿಗಳನ್ನು ಉಪಯೋಗಿಸುವುದರಿಂದಲೂ ನೋವನ್ನು ಕಡಿಮೆ ಮಾಡಲು ಸಾಧ್ಯವಿದೆ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries