ಮಂಜೇಶ್ವರ: ವಿಶ್ವ ಯೋಗ ದಿನದ ಅಂಗವಾಗಿ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಮಿಯಪದವು ಶ್ರೀ ಅಯ್ಯಪ್ಪ ಮಂದಿರ ಪರಿಸರದಲ್ಲಿ ದಿನಾಚರಣೆ ನಡೆಯಿತು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ಹರಿಶ್ಚಂದ್ರ ಮಂಜೇಶ್ವರ ಉದ್ಘಾಟಿಸಿ ಮಾತನಾಡಿ, ಯೋಗ ಇಂದು ಜಗತ್ತಿನ ನೆಮ್ಮದಿಯ ಸೂತ್ರವಾಗಿ ಬದಲಾಗಿದೆ. ಯೋಗ ಮಾನಸಿಕ ನೆಮ್ಮದಿ ಮತ್ತು ಅರೋಗ್ಯ ಸಂರಕ್ಷಣೆಯ ಸೂತ್ರವಾಗಿದೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ. ಅಧ್ಯಕ್ಷತೆ ವಹಿಸಿದ್ದರು, ಮುಖಂಡರಾದ ಮಣಿಕಂಠ ರೈ, ಎ.ಕೆ.ಕಯ್ಯಾರ್, ಸದಾಶಿವ ಚೇರಾಲ್, ಯತಿರಾಜ್ ಶೆಟ್ಟಿ, ಸಂತೋಷ್ ದೈಗೋಳಿ, ಪದ್ಮನಾಭ ರೈ, ರಕ್ಷನ್ ಅಡಕಳ, ಸುಬ್ರಮಣ್ಯ ಭಟ್ ಮೊದಲದವರು ಉಪಸ್ಥಿತರಿದ್ದರು.
ಶಿವಶಂಕರ್ ಮಾಸ್ತರ್ ಹಾಗೂ ಮೋಹಿನಿ ಟೀಚರ್ ಯೋಗಾಭ್ಯಾಸ ನಿರ್ವಹಿಸಿದರು. ಕೆ.ವಿ.ರಾಧಾಕೃಷ್ಣ ಭಟ್ ಸ್ವಾಗತಿಸಿ, ಶಂಕರ ನಾರಾಯಣ ಮುಂದಿಲ ವಂದಿಸಿದರು.