HEALTH TIPS

ಸಿಹಿ ಕುಂಬಳ ಬೀಜ ಎಂಬ ಸಂಜೀವಿನಿ ಬಗ್ಗೆ ಗೊತ್ತಾ? ಇದರ ಉಪಯೋಗ ಕೇಳಿದ್ರೆ ಅಚ್ಚರಿಯಾಗುತ್ತೆ!

 ಣ್ಣುಗಳಲ್ಲಿರುವ ಪೋಷಕಾಂಶ, ವಿಟಮಿನ್ ಹಾಗೂ ಸಾರವು ದೇಹದ ಆರೋಗ್ಯಕ್ಕೆ ಬಹಳ ಉತ್ತಮ ಎಂದು ತಿಳಿದಿದ್ದೇವೆ. ಹಣ್ಣುಗಳ ಸೇವನೆ ಆರೋಗ್ಯಕರ ಬೆಳವಣಿಗೆ. ಒಂದು ಸೇಬು ಹಣ್ಣು ವೈದ್ಯರನ್ನು ದೂರ ಮಾಡಲಿದೆ ಎಂದು ನಾವು ಕೇಳಿದ್ದೇವೆ. ಅದೇ ರೀತಿ ಹಣ್ಣಿನ ಬೀಜಗಳು ತರಕಾರಿ ಬೀಜಗಳು ಸಹ ಆರೋಗ್ಯಕ್ಕೆ ಉತ್ತಮ ಎಂದು ನಾವು ತಿಳಿದಿದ್ದೇವೆ.

ಅದ್ರಲ್ಲೂ ಕಲ್ಲಂಗಡಿ, ಕುಂಬಳಕಾಯಿ, ಸಿಹಿ ಕುಂಬಳದಲ್ಲಿರುವ ಬೀಜಗಳಂತು ಬೆಲೆಯಲ್ಲೂ ದುಬಾರಿ ಹಾಗೆ ಆರೋಗ್ಯಕ್ಕೂ ಬಹಳ ಉತ್ತಮ. ಹಾಗಾದರೆ ಸಿಹಿ ಕುಂಬಳಕಾಯಿ ಬೀಜಗಳು ಎಷ್ಟು ಆರೋಗ್ಯಕರ ಅಂಶಗಳ ಅಡಗಿಸಿಕೊಂಡಿದೆ ಎಂಬುದನ್ನು ನಾವಿಂದು ತಿಳಿಯೋಣ.

ಸಿಹಿ ಕುಂಬಳಕಾಯಿಯಲ್ಲೂ ಬೀಟಾ ಕ್ಯಾರೋಟಿನ್ ಎಂಬ ಪೋಷಕಾಂಶವಿದ್ದು ಕಣ್ಣಿನ ಆರೋಗ್ಯಕ್ಕೆ ಪೂರಕವಾಗಿದೆ. ಈ ತರಕಾರಿಗೆ ಚಿನ್ನದ ಬಣ್ಣ ಬರಲು ಈ ಪೋಷಕಾಂಶವೇ ಕಾರಣ. ಬೀಟಾ ಕ್ಯೋರೋಟಿನ್ ನಮ್ಮ ಜೀರ್ಣಾಂಗದಲ್ಲಿ ಜೀರ್ಣಗೊಂಡ ಬಳಿಕ ರೆಟಿನಾಲ್ ಎಂಬ ಪೋಷಕಾಂಶವಾಗಿ ಮಾರ್ಪಾಡು ಪಡೆಯುತ್ತದೆ. ಇದೊಂದು ವಿಟಮಿನ್ ಎ ಆಗಿದ್ದು ಕಣ್ಣಿಗೆ ಅತ್ಯುತ್ತಮವಾದ ಪೋಷಕಾಂಶವಾಗಿದೆ.

ಸಿಹಿ ಕುಂಬಳಕಾಯಿ ಬೀಜಗಳು ಹೆಚ್ಚಿನ ಪ್ರಮಾಣದ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ ಮತ್ತು ಕ್ಯಾನ್ಸರ್‌ನಿಂದಲೂ ರಕ್ಷಣೆ ಪಡೆಯಲು ಇವು ಸಹಕಾರಿಯಂತೆ.

ಚಯಾಪಚಯವನ್ನು ಸುಧಾರಿಸುತ್ತದೆ

ಕುಂಬಳಕಾಯಿ ಬೀಜಗಳ ಪ್ರಯೋಜನಗಳು ರಕ್ತದಲ್ಲಿನ ಸಕ್ಕರೆಯ ಮಟ್ಟಗಳು, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ನಿರ್ವಹಿಸಲು ಸಹಕಾರಿಯಾಗಿದೆ. ಇದು ಚಯಾಪಚಯವು ಯಾವುದೇ ತೊಂದರೆಗಳಿಲ್ಲದೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅವಶ್ಯಕವಾಗಿದೆ.

ಸಿಹಿ ಕುಂಬಳಕಾಯಿ ಬೀಜಗಳು ಮತ್ತು ಅವುಗಳ ಎಣ್ಣೆ ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಯಕೃತ್ತಿನ ಕಾಯಿಲೆಯ ಅಪಾಯ ಕಡಿಮೆ ಮಾಡಲಿದೆ

ಸಿಹಿ ಕುಂಬಳಕಾಯಿ ಬೀಜಗಳಲ್ಲಿನ ಆರೋಗ್ಯಕರ ಕೊಬ್ಬುಗಳು ಅಪಧಮನಿಕಾಠಿಣ್ಯದ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಸಿಹಿ ಕುಂಬಳಕಾಯಿ ಬೀಜಗಳು ಸ್ತನ ಕ್ಯಾನ್ಸರ್ ಅಪಾಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಕೂದಲಿಗೆ ಕುಂಬಳಕಾಯಿ ಬೀಜಗಳು

ಕುಂಬಳಕಾಯಿ ಬೀಜಗಳು ಅಥವಾ ಕುಂಬಳಕಾಯಿ ಬೀಜದ ಎಣ್ಣೆಯು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ನಿದ್ರಾಹೀನತೆಗೆ ಮದ್ದು

ಸಿಹಿ ಕುಂಬಳ ಬೀಜಗಳಲ್ಲಿ ಟ್ರಿಪ್ಟೊಫಾನ್ ಅಂಶದಿಂದಾಗಿ ಕುಂಬಳಕಾಯಿ ಬೀಜಗಳು ನಿದ್ರಾಹೀನತೆಯಿಂದ ಬಳಲುತ್ತಿರುವ ಜನರಿಗೆ ಸಹಾಯಕವಾಗಿದೆ. ಈ ಬೀಜವನ್ನು ನೆನೆಸಿಟ್ಟು ಅದರ ನೀರು ಕುಡಿಯುತ್ತಾರೆ. ಇಲ್ಲವೆ ಒಣಗಿಸಿ ಅದನ್ನು ಸವಿಯಲು ಬಹುದು. ಜೊತೆಗೆ ಆಹಾರಗಳ ಜೊತೆಗೂ ಸವಿಯುತ್ತಾರೆ.

ಸಿಹಿ ಕುಂಬಳ ಬೀಜವು ಬೀಟಾ ಕ್ಯಾರೋಟಿನ್ ಹೊಂದಿದ್ದು, ರೆಟಿನಾಲ್ ಚರ್ಮಕ್ಕೂ ಉತ್ತಮವಾದ ಪೋಷಕಾಂಶವಾಗಿದೆ. ಇದು ಚರ್ಮಕ್ಕೆ ಅಗತ್ಯವಾದ ಆರ್ದ್ರತೆ ಮತ್ತು ಸೆಳೆತಗಳನ್ನು ನೀಡುವ ಮೂಲಕ ಚರ್ಮ ಕಾಂತಿಯುಕ್ತವಾಗಿದ್ದು ನೆರಿಗೆರಹಿತವಾಗಿರುತ್ತದೆ. ಚರ್ಮದಲ್ಲಿ ಕಂಡುಬರುವ ಮೊಡವೆ ಮತ್ತು ದದ್ದುಗಳ, ಸೋರಿಯಾಸಿಸ್ ಎಂಬ ಚರ್ಮವ್ಯಾಧಿಗಳ ನಿವಾರಣೆಗೆ ವೈದ್ಯರು ಕ್ಯಾರೋಟಿನ್ ಯುಕ್ತ ಔಷಧಿಗಳನ್ನು ನೀಡುತ್ತಾರೆ. ಕುಂಬಳ ಕಾಯಿಯನ್ನು ನಿತ್ಯದ ಆಹಾರದಲ್ಲಿ ಸೇವಿಸುತ್ತಾ ಬರುವುದರಿಂದ ಚರ್ಮದ ಸಕಲ ತೊಂದರೆಗಳಿಗೆ ನೈಸರ್ಗಿಕ ಪರಿಹಾರ ದೊರಕುತ್ತದೆ.

ಹೆಚ್ಚಿದ ರೋಗನಿರೋಧಕ ಶಕ್ತಿ

ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕಾದರೆ ಸಿಹಿ ಕುಂಬಳಕಾಯಿ ಬೀಜಗಳು ಸಹಕಾರಿಯಾಗುತ್ತವೆ. ನಿತ್ಯ ನಿಮ್ಮ ಆಹಾರದಲ್ಲಿ ಸಿಹಿ ಕುಂಬಳ ಬೀಜಗಳು ಸೇರಿಸಿದರೆ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ.

ಮೂಳೆಗಳ ಗಟ್ಟಿಯಾಗಿಸುವಿಕೆ

ಸಿಹಿ ಕುಂಬಳ ಬೀಜದಲ್ಲಿ ಮೆಗ್ನೀಸಿಯಮ್ ಮತ್ತು ರಂಜಕದ ಪ್ರಮಾಣ ಹೆಚ್ಚಾಗಿರುವುದರಿಂದ ಇದರ ಸೇವನೆಯು ನಿಮ್ಮ ದೇಹದ ಮೂಳೆಗಳ ಗಟ್ಟಿಯಾಗಿಸಲು ನೆರವಾಗಲಿದೆ. ಬಲವಾದ ಮೂಳೆಗಳು ಮತ್ತು ಆಸ್ಟಿಯೊಪೊರೋಸಿಸ್ ತಡೆಗಟ್ಟುವಿಕೆಗೆ ಅವಶ್ಯಕವಾಗಿದೆ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries