ಜೋಹಾನಸ್‌ಬರ್ಗ್: ಮೂರು ದಶಕಗಳಿಂದ ದಕ್ಷಿಣ ಆಫ್ರಿಕಾದಲ್ಲಿ ಅಧಿಕಾರದಲ್ಲಿರುವ 'ದ ಆಫ್ರಿಕನ್ ಕಾಂಗ್ರೆಸ್' (ಎಎನ್‌ಸಿ) ಪಕ್ಷವು ಈ ಬಾರಿ ಬಹುಮತ ಪಡೆಯುವಲ್ಲಿ ವಿಫಲವಾಗಿದ್ದು, ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.
ಜೋಹಾನಸ್‌ಬರ್ಗ್: ಮೂರು ದಶಕಗಳಿಂದ ದಕ್ಷಿಣ ಆಫ್ರಿಕಾದಲ್ಲಿ ಅಧಿಕಾರದಲ್ಲಿರುವ 'ದ ಆಫ್ರಿಕನ್ ಕಾಂಗ್ರೆಸ್' (ಎಎನ್‌ಸಿ) ಪಕ್ಷವು ಈ ಬಾರಿ ಬಹುಮತ ಪಡೆಯುವಲ್ಲಿ ವಿಫಲವಾಗಿದ್ದು, ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.
ಶನಿವಾರ ಮತ ಎಣಿಕೆ ನಡೆದಿದ್ದು, ಅಧ್ಯಕ್ಷ ಸಿರಿಲ್ ರಾಮಫೋಸಾ ನೇತೃತ್ವದ ಎಎನ್‌ಸಿಯು ಶೇಕಡ 40ರಷ್ಟು ಮತವನ್ನು ಪಡೆದಿದೆ.
1994ರಿಂದ ಏಕಾಧಿಪತ್ಯ ಸ್ಥಾಪಿಸಿದ್ದ ಎಎನ್‌ಸಿಗೆ ಈ ಬಾರಿ ಸಂಕಷ್ಟ ಎದುರಾಗಿದ್ದು, ದಕ್ಷಿಣ ಆಫ್ರಿಕಾ ರಾಜಕೀಯ ಕ್ಷೇತ್ರದಲ್ಲಿ ಇದೊಂದು ಐತಿಹಾಸಿಕ ಬೆಳವಣಿಗೆಯಾಗಿದೆ.
ಎಎನ್‌ಸಿ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಬಹುದು ಅಥವಾ ಇತರ ಪಕ್ಷಗಳ ಮನವೊಲಿಸಿ ಮರುಚುನಾವಣೆ ನಡೆಯುವಂತೆ ನೋಡಿಕೊಳ್ಳುವ ಸಾಧ್ಯತೆ ಇದೆ.
'ಚುನಾವಣೆಗೆ ಮುನ್ನವೆ ಇತರ ಪಕ್ಷಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಅಂತಿಮ ಫಲಿತಾಂಶ ಬಂದ ಬಳಿಕ ಪಕ್ಷದ ಉನ್ನತ ಸಮಿತಿಯು ಸಭೆ ಸೇರಿ ನಿರ್ಧಾರ ಕೈಗೊಳ್ಳಲಿದೆ' ಎಂದು ಎಎನ್‌ಸಿಯ ಪ್ರಭಾರಿ ಕಾರ್ಯದರ್ಶಿ ಹನರಲ್ ನೋಮ್‌ವುಲ್ಲಾ ಮೊಕೊನ್ಯಾನೆ ತಿಳಿಸಿದ್ದಾರೆ.
ಪ್ರಮುಖ ವಿರೋಧ ಪಕ್ಷವಾಗಿರುವ ಡೆಮಾಕ್ರಾಟಿಕ್ ಅಲಯನ್ಸ್ (ಡಿಎ) ಎರಡನೇ ಸ್ಥಾನದಲ್ಲಿದ್ದು, ಶೇಕಡ 21.71ರಷ್ಟು ಮತವನ್ನು ಗಳಿಸಿದೆ.
'ದಕ್ಷಿಣ ಆಫ್ರಿಕಾದಲ್ಲಿ ಈವರೆಗೆ ಬಹುಮತ ಇಲ್ಲದ ಸರ್ಕಾರ ರಚನೆಯಾಗಿಲ್ಲ. ಆದರೆ ಬೇರೆ ಪಕ್ಷಕ್ಕೆ ಈ ಅವಕಾಶ ಇದೆ' ಎಂದು ಡಿಎ ಪಕ್ಷದ ನಾಯಕಿ ಹೆಲೆನ್ ಝಿಲ್ಲೆ ತಿಳಿಸಿದ್ದಾರೆ.