HEALTH TIPS

ಇಸ್ರೇಲ್‌ನಿಂದ ಅಮಾನವೀಯ ವರ್ತನೆ: ವಿಶ್ವಸಂಸ್ಥೆ

             ಜಿನಿವಾ: ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಯುದ್ಧದ ವೇಳೆ ಎರಡೂ ದೇಶಗಳ ಸಶಸ್ತ್ರ ಪಡೆಗಳು ಅಪರಾಧ ಕೃತ್ಯಗಳನ್ನು ಎಸಗಿದ್ದು, ಅದರಲ್ಲೂ ಇಸ್ರೇಲ್‌ ಅಮಾನವೀಯ ವರ್ತನೆಯನ್ನು ತೋರಿದೆ ಎಂದು ವಿಶ್ವಸಂಸ್ಥೆಯ ತನಿಖಾ ವರದಿ ತಿಳಿಸಿದೆ.

            ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಯುದ್ಧದ ಬಗ್ಗೆ ವಿಶ್ವಸಂಸ್ಥೆಯ ಸ್ವತಂತ್ರ ಆಯೋಗವು ಸಮಗ್ರ ತನಿಖೆ ನಡೆಸಿ ವರದಿ ಸಿದ್ಧಪಡಿಸಿದೆ.

            'ಯುದ್ಧದಲ್ಲಿ ಇಸ್ರೇಲ್‌ ದೇಶವು ಅಂತರರಾಷ್ಟ್ರೀಯ ಮಾನವೀಯ ಕಾನೂನು(ಐಎಚ್‌ಎಲ್) ಮತ್ತು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನನ್ನು (ಐಎಚ್‌ಆರ್‌ಎಲ್‌) ಉಲ್ಲಂಘಿಸಿದೆ. ಗಾಜಾದಲ್ಲಿ ನಾಗರಿಕ ಸಮಾಜದ ಮೇಲೆ ವ್ಯವಸ್ಥಿತ ಮತ್ತು ವ್ಯಾಪಕವಾದ ದಾಳಿ ನಡೆದಿದೆ' ಎಂದು ವರದಿ ತಿಳಿಸಿದೆ.

                'ಕೊಲೆ, ಪಾಲೆಸ್ಟೀನ್‌ ಯುವಕ-ಯುವತಿಯರಿಗೆ ಲೈಂಗಿಕ ಕಿರುಕುಳ, ಒತ್ತಾಯಪೂರ್ವಕವಾಗಿ ಸ್ಥಳಾಂತರ, ಹಿಂಸೆಯಂತಹ ಕ್ರೌರ್ಯವನ್ನು ಇಸ್ರೇಲ್ ಎಸಗಿದೆ. ಹಮಾಸ್‌ ಮಿಲಿಟರಿ ಪಡೆ, ಪ್ಯಾಲೆಸ್ಟೀನ್‌ನ ಇತರ ಸಶಸ್ತ್ರ ಪಡೆಗಳು ಮತ್ತು ಪ್ಯಾಲೆಸ್ಟೀನ್‌ ನಾಗರಿಕರು ಕೂಡ ಕೊಲೆ, ಲೈಂಗಿಕ ಕಿರುಕುಳದಂತಹ ಅಮಾನವೀಯ ವರ್ತನೆ ತೋರಿದ್ದಾರೆ' ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಿಶ್ವಸಂಸ್ಥೆಯ ವರದಿಯನ್ನು ತಿರಸ್ಕರಿಸಿರುವ ಇಸ್ರೇಲ್‌, 'ನಮ್ಮ ವಿರುದ್ಧ ವ್ಯವಸ್ಥಿತವಾಗಿ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ' ಎಂದು ಆರೋಪಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries