ಕಾಸರಗೋಡು: ಸ್ಮಾರ್ಟ್ ಪೋನ್ ಸ್ಫೋಟಗೊಂಡು ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಕಾಸರಗೋಡು ಕಲ್ಲಾರ್ ನಿವಾಸಿ ಪ್ರಜಿಲ್ ಮ್ಯಾಥ್ಯೂ ಎಂಬುವವರ ಸ್ಮಾರ್ಟ್ ಪೋನ್ ಸ್ಫೋಟಗೊಂಡಿದೆ.
ಪೋನ್ ಪ್ರಜಿಲ್ ಪ್ಯಾಂಟಿನ ಕಿಸೆಯಲ್ಲಿತ್ತು. ಬಿಸಿಯಾದ ಪೋನ್ ಮೊದಲು ಹೊಗೆಯನ್ನು ಹೊರಸೂಸಿತು. ಬಳಿಕ ತಕ್ಷಣ ಸ್ಫೋಟಗೊಂಡಿತೆಂದು ಹೇಳಲಾಗಿದೆ. ಪ್ರಜಿಲ್ ಅವರ ತೊಡೆ ಮತ್ತು ಕೈಗೆ ಗಾಯವಾಗಿದೆ. ಸ್ಫೋಟಗೊಂಡ ಪೋನ್ ನಂತರ ಬೆಂಕಿ ಹಿಡಿದು ಉರಿದು ನಾಶವಾಯಿತು. ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ.