ಕೊಲ್ಲಂ: ಕೊಲ್ಲಂ ಸರ್ಕಾರಿ ಶಾಲೆಯ ಎಸ್.ಎಸ್.ಎಲ್.ಸಿ. ಭೌತಶಾಸ್ತ್ರ ಪರೀಕ್ಷೆಯ ನಾಪತ್ತೆಯಾದ ಪೇಪರ್ ಹುಡುಕಲು ಶಾಲೆಯ ವಿದ್ಯಾರ್ಥಿ ಜೋಯಲ್ ಅವರ ಒಂದು ವರ್ಷದ ಹೋರಾಟ ಫಲ ನೀಡಿದೆ.
ನಾಪತ್ತೆಯಾದ ಉತ್ತರ ಪತ್ರಿಕೆಯು ಮತ್ತೊಬ್ಬ ವಿದ್ಯಾರ್ಥಿಯ ಪತ್ರಿಕೆಯೊಂದಿಗೆ ಅಂಟಿಕೊಂಡಿರುವುದು ಕಂಡುಬಂದಿದೆ.
ಈ ಕುರಿತು ಪರೀಕ್ಷಾಂಗ ಆಯುಕ್ತರ ಕಚೇರಿಯಿಂದ ಸೂಚನೆ ಬಂದಿದೆ. ಕಾಣೆಯಾದ ಪತ್ರಿಕೆಯಲ್ಲಿ 13 ಅಂಕಗಳಿಗೆ ಉತ್ತರವಿತ್ತು. ಜೋಯಲ್‍ಗೆ ಭೌತಶಾಸ್ತ್ರಕ್ಕೆ ಇಷ್ಟು ಅಂಕಗಳನ್ನು ಮತ್ತೆ ಹೆಚ್ಚುವರಿಯಾಗಿ ನೀಡುವಂತೆ ಸೂಚಿಸಲಾಗಿದೆ. ಕಡಮೆ ಅಂಕಗಳ ವಿರುದ್ಧ ದೂರು ನೀಡಿದ ಜೋಯಲ್ ಕೃತಿಚೌರ್ಯಗಾರ ಎಂದು ಬಿಂಬಿಸುವ ಪ್ರಯತ್ನವೂ ನಡೆದಿದೆ. ಪರೀಕ್ಷಾ ಆಯುಕ್ತರ ಆದೇಶದನ್ವಯ ಉತ್ತರ ಪತ್ರಿಕೆಯಲ್ಲಿ ನಿರ್ಲಕ್ಷ್ಯ ವಹಿಸಿರುವ ಇನ್ವಿಜಿಲೇಟರ್, ಮುಖ್ಯ ಅಧೀಕ್ಷಕರು ಹಾಗೂ ಉಪ ಮುಖ್ಯ ಅಧೀಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
10 ನೇ ತರಗತಿಯ ಭೌತಶಾಸ್ತ್ರ ಪರೀಕ್ಷೆಯು ಮಾರ್ಚ್ 24, 2023 ರಂದು ಜೋಯಲ್ ಬರೆದಿದ್ದರು. ಜೋಯಲ್ ನಾಲ್ಕು ಹಾಳೆಗಳಲ್ಲಿ ಪರೀಕ್ಷೆಗೆ ಉತ್ತರ ಬರೆದಿದ್ದರು. ಅನಿರೀಕ್ಷಿತವಾದ ಗಾಳಿಯ ರಭಸಕ್ಕೆ ಎರಡು ಹಾಳೆಗಳು ಹಾರಿ ಪಕ್ಕದಲ್ಲಿ ಕುಳಿತಿದ್ದ ಹುಡುಗನ ಪಕ್ಕದಲ್ಲಿ ಬಿದ್ದವು. ಜೋಯಲ್ ಅದನ್ನು ತೆಗೆದುಕೊಂಡು ತರಗತಿಯಲ್ಲಿ ಶಿಕ್ಷಕರಿಗೆ ನೀಡಿದರು. ಶಿಕ್ಷಕ ಜೋಯಲ್ ಜೊತೆಗೆ ಮುಖ್ಯೋಪಾಧ್ಯಾಯಿನಿಯನ್ನು ಸಂಪರ್ಕಿಸಿದರು. ನಂತರ, ಎಲ್ಲಾ ಪರೀಕ್ಷೆಯ ಪೇಪರ್‍ಗಳನ್ನು ಪ್ಯಾಕ್ ಮಾಡಿ ಸುರಕ್ಷಿತವಾಗಿ ಹಸ್ತಾಂತರಿಸಲಾಗಿದೆ ಎಂದು ಜೋಯೆಲ್ ಗೆ ತಿಳಿಸಲಾಗಿತ್ತು.
ಜೋಯಲ್ ಭೌತಶಾಸ್ತ್ರಕ್ಕೆ ಹೆಚ್ಚಿನ ಅಂಕಗಳನ್ನು ನಿರೀಕ್ಷಿಸಿದ್ದರು ಮತ್ತು 22 ಅಂಕಗಳನ್ನು ಪಡೆದರು. ಆದರೆ ಗ್ರಹಿಸಿದಷ್ಟು ಅಂಕಗಳು ಬಂದಿರಲಿಲ್ಲ. ಬಳಿಕ ಅವರು ಅದೇ ಶಾಲೆಯಲ್ಲಿ ಪ್ಲಸ್ ವನ್ ಗೆ ಸೇರಲು ಬಯಸಿದ್ದರೂ ಅಲ್ಲಿ ಪ್ರವೇಶ ಪಡೆಯಲಾಗಲಿಲ್ಲ. ಇದು ಅಧ್ಯಯನಶೀಲ ಜೋಯಲ್ ಮೇಲೆ ಭಾರೀ ಮಾನಸಿಕ ಯಾತನೆಗೆ ಕಾರಣವಾಗಿ ಮುಂದೆ ಓದುವುದಿಲ್ಲ ಎಂದು ನಿರ್ಧರಿಸಿದರು.
ಪೋಷಕರ ಸಲಹೆ ಮತ್ತು ಒತ್ತಾಯದ ಮೇರೆಗೆ ಜೋಯೆಲ್ ಪರೀಕ್ಷೆಯ ಪತ್ರಿಕೆ ಕಳೆದುಹೋಗಿರುವುದನ್ನು ಅರಿತು ಕೊನೆಗೂ ಪ್ಲಸ್‍ಒನ್ ತರಗತಿಗೆ ಸೇರ್ಪಡೆಗೊಂಡರು. ಮಕ್ಕಳ ಹಕ್ಕುಗಳ ಆಯೋಗ ಮತ್ತು ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಹಲವಾರು ವಿಚಾರಣೆಗಳು ನಡೆದವು.
ಪರೀಕ್ಷೆಯ ಉತ್ತರ ಪತ್ರಿಕೆಯ ನಕಲು ಮಾಡುವಾಗ ಹೆಚ್ಚುವರಿ ಹಾಳೆ ನಾಪತ್ತೆಯಾಗಿರುವುದು ಕಂಡುಬಂದಿದೆ. ಪರೀಕ್ಷೆಯ ಮೌಲ್ಯಮಾಪನದ ಬಳಿಕ ಉತ್ತರ ಪತ್ರಿಕೆ ಲಭಿಸಿತು. ಇದಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಿದ್ಧತೆ ನಡೆಸಲಾಗಿದೆ.