ಮಂಜೇಶ್ವರ : ವಿಶ್ವದಲ್ಲೇ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಚುನಾವಣಾ ವ್ಯವಸ್ಥೆಯ ಕುರಿತು ಶಾಲಾ ಮಕ್ಕಳಿಗೆ ಅರಿವು ಮೂಡಿಸಲು ಕುಳೂರಿನ ಸÀರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ನಾಯಕನ ಆಯ್ಕೆಗೆ ಚುನಾವಣೆ ನಡೆಸಲಾಯಿತು.
ಆ ಪ್ರಯುಕ್ತ ಎರಡು ದಿನಗಳ ಹಿಂದೆ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಶಾಲಾ ಮುಖ್ಯ ಶಿಕ್ಷಕಿ ಮಾಲತಿ ಅವರಿಗೆ ಸಲ್ಲಿಸಿದರು.
ಶನಿವಾರ ನಡೆದ ಶಾಲಾ ಚುನಾವಣೆಯಲ್ಲಿ ತಮ್ಮ ನೆಚ್ವಿನ ವಿದ್ಯಾರ್ಥಿ ಅಭ್ಯರ್ಥಿಗೆ ಮತದಾನಗೈಯ್ಯಲು ಮಕ್ಕಳು ಸರದಿ ಸಾಲಿನಲ್ಲಿ ನಿಂತು ತಮ್ಮ ಕೈ ಬೆರಳಿಗೆ ಮತದಾನದ ಗುರುತನ್ನು ಹಾಕಿಸಿ ಗೌಪ್ಯ ಮತದಾನದ ಮೂಲಕ ಮತ ಚಲಾಯಿಸಿದರು.
ಮತದಾನದ ಪ್ರಕ್ರಿಯೆಯನ್ನು ಶಾಲಾ ಮಕ್ಕಳೇ ನಿರ್ವಹಿಸಿದ್ದು ವಿಶೇಷವಾಗಿತ್ತು. ವಿದ್ಯಾರ್ಥಿಗಳಾದ ಮೋಕ್ಷಿತ್, ಚೇತನಾ ಬಿ, ಮೈತ್ರಿ, ಪ್ರಶಸ್ತ್ ಪಿ.ವೈ. ಶೆಟ್ಟಿ, ಅಂಕಿತ್ ರಾಜ್, ಗಾಯತ್ರಿ, ಶ್ರೀಜಿತ್ ಹಾಗೂ ಯಶ್ವಿತ ಸಹಕರಿಸಿದರು.
ಅಂತಿಮವಾಗಿ ಚುನಾವಣಾ ಫಲಿತಾಂಶವನ್ನು ಶಾಲಾ ಮುಖ್ಯ ಶಿಕ್ಷಕಿ ಘೋಷಿಸಿದರು. ಈ ವೇಳೆ ಮಕ್ಕಳ ಸಂಭ್ರಮ ಮುಗಿಲು ಮುಟ್ಟಿತ್ತು.
ಶಾಲಾ ನಾಯಕನಾಗಿ ಪ್ರಥಮ್ ಭಾರದ್ವಾಜ್ ಪಿ.ಎಚ್, ಉಪನಾಯಕನಾಗಿ ವಂಶಿಕ್ ಆಯ್ಕೆಯಾದರು. ಕ್ರೀಡಾ ಮಂತ್ರಿಯಾಗಿ ನಿಶ್ವಿತ್, ಆರೋಗ್ಯ ಮಂತ್ರಿಯಾಗಿ ಹನ್ವಿಕ ಹಾಗೂ ಸಾಂಸ್ಕøತಿಕ ಮಂತ್ರಿಯಾಗಿ ಯಶ್ವಿಕ್ ಜೆ ಕುಮಾರ್ ಅವರು ಆಯ್ಕೆಯಾದರು. ನೂತನವಾಗಿ ಆಯ್ಕೆಯಾದ ಶಾಲಾ ನಾಯಕರನ್ನು ಮೆರವಣಿಗೆ ಮೂಲಕ ವಿದ್ಯಾರ್ಥಿಗಳು ಅಭಿನಂದಿಸಿ ಸಂಭ್ರಮಿಸಿದರು. ಬಳಿಕ ನೂತನ ಬಾಲ ಮಂತ್ರಿಮಂಡಲದ ಪ್ರತಿಜ್ಞಾ ಬೋಧನೆ ನಡೆಯಿತು. ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದು ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು.