ಜಮ್ಮು: ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ ಅಮರನಾಥ ಗುಹೆಯ ತೀರ್ಥಯಾತ್ರೆಗೆ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಇಂದು (ಜೂನ್ 28ರಂದು) ಚಾಲನೆ ನೀಡಿದರು. ಇಲ್ಲಿನ ಭಗವತಿ ನಗರದಲ್ಲಿರುವ ಯಾತ್ರಿ ನಿವಾಸ ನೆಲೆಯಿಂದ 4,603 ಯಾತ್ರಾರ್ಥಿಗಳ ಮೊದಲ ತಂಡ ಪ್ರಯಾಣ ಆರಂಭಿಸಿತು.

ಯಾತ್ರಾರ್ಥಿಗಳು ಕಾಶ್ಮೀರದ ಅವಳಿ ನೆಲೆಗಳಾದ ಉತ್ತರ ಕಾಶ್ಮೀರದ ಬಲ್ತಾಲ್ ಮತ್ತು ದಕ್ಷಿಣ ಕಾಶ್ಮೀರದ ಅನಂತನಾಗ್‌ಗೆ ಜಮ್ಮುವಿನಿಂದ ಬಿಗಿ ಭದ್ರತೆಯಲ್ಲಿ ತೆರಳಿದರು.
ಹಿಮಾಲಯದಲ್ಲಿರುವ 3,880 ಮೀಟರ್ ಎತ್ತರದ ಪವಿತ್ರ ಗುಹೆ ದೇಗುಲದಲ್ಲಿ ಸ್ವಾಭಾವಿಕವಾಗಿ ರೂಪುಗೊಂಡಿರುವ ಹಿಮದ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಉತ್ಸಾಹದಿಂದ ಹೊರಟ ಯಾತ್ರಿಕರಿಗೆ ಶುಭ ಕೋರಿದ ಸಿನ್ಹಾ, 'ಬಾಬಾ ಅಮರನಾಥ ಎಲ್ಲರ ಬದುಕಿನಲ್ಲಿ ಶಾಂತಿ, ಸಂತಸ ಮತ್ತು ಸಮೃದ್ಧಿಯನ್ನು ಕರುಣಿಸಲಿ' ಎಂದು ಪ್ರಾರ್ಥಿಸಿದರು.
52 ದಿನಗಳ ತೀರ್ಥಯಾತ್ರೆಯು ಅನಂತನಾಗ್‌ನಿಂದ ಸಾಗುವ ಸಾಂಪ್ರದಾಯಿಕ 48 ಕಿ.ಮೀ. ದೂರದ ನುನ್ವಾನ್-ಪಹಲ್ಗಾಮ್ ಮಾರ್ಗ ಮತ್ತು ಗಂದರ್‌ಬಾಲ್‌ನಿಂದ ಹೊರಡುವ 14 ಕಿ.ಮೀ. ಅಂತರದ ಕಡಿದಾದ ಬಾಲ್ಟಾಲ್ ಮಾರ್ಗದಲ್ಲಿ ಪ್ರಾರಂಭವಾಗಲಿದೆ.
ಮೂಲಗಳ ಪ್ರಕಾರ, ಸುಮಾರು 3.5 ಲಕ್ಷಕ್ಕೂ ಹೆಚ್ಚು ಜನರು ಈ ಯಾತ್ರೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಎರಡೂ ಮಾರ್ಗಗಳಲ್ಲಿ 125 ಕಡೆ ಆಹಾರ ತಯಾರಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಯಾತ್ರಿಕರಿಗೆ ಸುಮಾರು 6,000 ಸ್ವಯಂ ಸೇವಕರು ನೆರವಾಗಲಿದ್ದಾರೆ ಎನ್ನಲಾಗಿದೆ.