ಕಾಸರಗೋಡು: ಜಿಲ್ಲಾ ಅಕ್ವಾಟಿಕ್ ಅಸೋಸಿಯೇಶನ್‍ನ ಆಶ್ರಯದಲ್ಲಿ ಕಾಸರಗೋಡಿನಲ್ಲಿ ನಡೆದ ಜೂನಿಯರ್ ಮತ್ತು ಸಬ್ ಜೂನಿಯರ್ ವಿಭಾಗ ಈಜು ಸ್ಪರ್ಧೆಯನ್ನು ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್ ಅಧ್ಯಕ್ಷ ಹಬೀಬ್ ರಹಮಾನ್ ಉದ್ಘಾಟಿಸಿದರು.
ಅಕ್ವಾಟಿಕ್ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ಬಿಜು ಜೋಸೆಫ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಕೆ.ವಿ.ಸುರೇಂದ್ರನ್ ಉಪಸ್ಥಿತರಿದ್ದರು. ಅಕ್ವಾಟಿಕ್ ಅಸೋಸಿಯೇಶನ್ ಜಿಲ್ಲಾ ಕಾರ್ಯದರ್ಶಿ ಎಂ.ಟಿ.ಪಿ.ಅಶ್ರಫ್ ಸ್ವಾಗತಿಸಿದರು.