ಮುಂಬೈ: ಮುಂಬೈನ ಘಾಟ್ಕೋಪರ್ ಪ್ರದೇಶದಲ್ಲಿ 17 ಜನರ ಸಾವಿಗೆ ಕಾರಣವಾಗಿದ್ದ ಹೋರ್ಡಿಂಗ್ ಕುಸಿತ ಪ್ರಕರಣ ಸಂಬಂಧ ಇನ್ನಿಬ್ಬರು ವ್ಯಕ್ತಿಗಳನ್ನು ಗೋವಾದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈ: ಮುಂಬೈನ ಘಾಟ್ಕೋಪರ್ ಪ್ರದೇಶದಲ್ಲಿ 17 ಜನರ ಸಾವಿಗೆ ಕಾರಣವಾಗಿದ್ದ ಹೋರ್ಡಿಂಗ್ ಕುಸಿತ ಪ್ರಕರಣ ಸಂಬಂಧ ಇನ್ನಿಬ್ಬರು ವ್ಯಕ್ತಿಗಳನ್ನು ಗೋವಾದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾಹ್ನವಿ ಮರಾಠೆ ಹಾಗೂ ಸಾಗರ್ ಪಾಟೀಲ್ ಎಂಬಿಬ್ಬರನ್ನು ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ವರೆಗೂ ಸಂಸ್ಥೆಯ ಜೊತೆ ನಿರ್ದೇಶಕರಾಗಿದ್ದ ಮರಾಠೆ, ಈ ಹೋರ್ಡಿಂಗ್ ಸಂಬಂಧ ಹಣಕಾಸು ಲಾಭಗಳನ್ನು ಪಡೆದುಕೊಂಡಿದ್ದರು. ಪಾಟೀಲ್ ಈ ಹೋರ್ಡಿಂಗ್‌ನ ಗುತ್ತಿಗೆದಾರರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಎಗೊ ಮಿಡಿಯಾ ಸಂಸ್ಥೆಯ ನಿರ್ದೇಶಕ ಭವೇಶ್ ಕುಮರ್ ಹಾಗೂ ಸ್ಟ್ರಕ್ಚರಲ್ ಎಂಜಿನಿಯರ್ ಮನೋಜ್ ಸಂಘು ಅವರನ್ನು ಅವರನ್ನು ಬಂಧಿಸಲಾಗಿತ್ತು.