ಬದಿಯಡ್ಕ: ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದ ಪ್ರವೇಶೋತ್ಸವ ನಿನ್ನೆ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯಿನಿ ಮಿನಿ ಪಿ ವಹಿಸಿದ್ದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸಲೀಂ ಎಡನೀರು ಉದ್ಘಾಟಿಸಿ ಮಾತನಾಡಿ, ನವಜೀವನ ಸೆಕೆಂಡರಿ ಶಾಲೆ, ಕಾಸರಗೋಡು ಜಿಲ್ಲೆಯಲ್ಲಿ ಅತ್ಯಂತ ಇತಿಹಾಸ ಇರುವ ಶಾಲೆಯಾಗಿz.. ಅದೆಷ್ಟೋ ವಿದ್ಯಾರ್ಥಿಗಳು ದೇಶವಿದೇಶಗಳಲ್ಲಿ ವಿಜ್ಞಾನಿಗಳಾಗಿ, ಸೈನಿಕರಾಗಿ ಸೇವೆ ಸಲ್ಲಿಸಿರುತ್ತಾರೆ, ಮಹಾಕವಿ ಕೈಯಾರ ಕಿಞ್ಞಣ್ಣ ರೈಗಳು ಅಧ್ಯಾಪಕರಾಗಿ ಸೇವಿ ಸಲ್ಲಿಸಿರುವ ಶಾಲೆಯಾಗಿದೆ. ಹೊಸ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಬೆಳೆಸಿಕೊಂಡು ಉತ್ತಮ ವಿದ್ಯಾರ್ಥಿಯಾಗಿ ಶಾಲೆಗೆ ಕೀರ್ತಿಯನ್ನು ತರಬೇಕೆಂದು ಹಾರೈಸಿದರು.
ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಶಾಫಿ ಚೂರಿಪಳ್ಳ, ಸಮಾಜ ಸೇವಕ ಆನಂದ ಕೆ ಮವ್ವಾರ್, ರಕ್ಷಕ ಶಿಕ್ಷಕ ಸಂಘದ ಸದಸ್ಯ ಹಮೀದ್ ಕೆಡಂಜಿ, ಸುಧಾಕರನ್ ಬದಿಯಡ್ಕ, ಆನಂದ. ಬಿ, ಮಾತೃ ಸಮಿತಿ ಉಪಾಧ್ಯಕೆ ಬೇಬಿ ಶಾಲಿನಿ, ಹಿರಿಯ ಅಧ್ಯಾಪಕಿ ಪ್ರಭಾವತಿ ಟೀಚರ್ ಶುಭ ಹಾರೈಸಿದರು. ನಿರಂಜನ ರೈ ಪೆರಡಾಲ ಸ್ವಾಗತಿಸಿ, ವಿದ್ಯಾ ಟೀಚರ್ ವಂದಿಸಿದರು. ರಾಜೇಶ್ ಮಾಸ್ತರ್ ಅಗಲ್ಪಾಡಿ ಕಾರ್ಯಕ್ರಮ ನಿರ್ವಹಿಸಿದ್ದರು. ಅಧ್ಯಾಪಕ ವೃಂದ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ ಜರಗಿತು. ನವಾಗತ ಪುಟಾಣಿ ಮಕ್ಕಳನ್ನು ಸಿಹಿ ತಿಂಡಿ ನೀಡಿ ಸ್ವಾಗತಿಸಲಾಯಿತು.