ಗೋವಾ: ಮಾನ್ಸೂನ್ ಸಂದರ್ಭದಲ್ಲಿ ಗೋವಾ ರಾಜ್ಯದ ವ್ಯಾಪ್ತಿಯ ಜಲಪಾತಗಳಿಗೆ ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧಿಸುವ ಅಲ್ಲಿನ ಅರಣ್ಯ ಇಲಾಖೆಯ ನಿರ್ಧಾರಕ್ಕೆ ಪ್ರವಾಸೋದ್ಯಮ ಸಚಿವ ರೋಹನ್ ಕೌಂತೆ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಗೋವಾ: ಮಾನ್ಸೂನ್ ಸಂದರ್ಭದಲ್ಲಿ ಗೋವಾ ರಾಜ್ಯದ ವ್ಯಾಪ್ತಿಯ ಜಲಪಾತಗಳಿಗೆ ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧಿಸುವ ಅಲ್ಲಿನ ಅರಣ್ಯ ಇಲಾಖೆಯ ನಿರ್ಧಾರಕ್ಕೆ ಪ್ರವಾಸೋದ್ಯಮ ಸಚಿವ ರೋಹನ್ ಕೌಂತೆ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ದೆಹಲಿಯಿಂದ ಬಂದಿರುವ ಕೆಲ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಇಂತಹ ಮೂರ್ಖತನದ ನಿರ್ಧಾರ ತೆಗೆದುಕೊಳ್ಳುತ್ತಾರೆ.
ಸ್ಥಳೀಯ ಆರ್ಥಿಕತೆಗೆ ಉತ್ತೇಜನ ನೀಡುವುದಲ್ಲದೇ ಗೋವಾ ರಾಜ್ಯದ ಪ್ರಾಕೃತಿಕ ಸೊಬಗನ್ನು ನಮ್ಮ ಜನಪಾತಗಳು ತೆರೆದಿಡುತ್ತವೆ. ನಿಷೇಧ ಕುರಿತು ಅರಣ್ಯ ಸಚಿವ ಹಾಗೂ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸುತ್ತೇನೆ ಎಂದು ಅವರು ವರದಿಗಾರರಿಗೆ ತಿಳಿಸಿದ್ದಾರೆ.
ಸುರಕ್ಷತೆ ಬೇಕು ನಿಜ. ಹಾಗಂತ, ಜಲಪಾತಗಳನ್ನು ನೋಡಲು ತಡೆಯುವುದಕ್ಕೆ ಅದೊಂದೆ ಕಾರಣವಾಗಬಾರದು. ಅದಕ್ಕೆ ನಾವು ಪರಿಹಾರ ಹುಡುಕುತ್ತೇವೆ ಎಂದು ತಿಳಿಸಿದ್ದಾರೆ.
ಮುಂಗಾರು ಮಳೆ ಸಮಯದಲ್ಲಿ ವಿಶ್ವವಿಖ್ಯಾತ ದೂದ್‌ಸಾಗರ ಸೇರಿದಂತೆ ಎಲ್ಲ ಜಲಪಾತಗಳಿಗೆ ಪ್ರವೇಶವನ್ನು ನಿರ್ಭಂದಿಸುವ ಆದೇಶವನ್ನು ಗೋವಾ ಅರಣ್ಯ ಇಲಾಖೆ ಇತ್ತೀಚೆಗೆ ಹೊರಡಿಸಿತ್ತು.