ತಿರುವನಂತಪುರಂ: ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಗೆಲುವಿನತ್ತ ದಾಪುಗಾಲಿಡುತ್ತಿರುವ ಎನ್ ಡಿಎ ಅಭ್ಯರ್ಥಿ ಸುರೇಶ್ ಗೋಪಿ ಅವರನ್ನು ಪ್ರಕಾಶ್ ಜಾವಡೇಕರ್ ಅಭಿನಂದಿಸಿದ್ದಾರೆ.
ಲೀಡ್ ಮಟ್ಟ ಅರ್ಧ ಲಕ್ಷ ದಾಟಿದ ಹಿನ್ನೆಲೆಯಲ್ಲಿ ಕೇರಳದ ಸಂಘಟನೆಯ ಉಸ್ತುವಾರಿ ನಾಯಕರೂ ಆಗಿರುವ ಪ್ರಕಾಶ್ ಜಾವಡೇಕರ್ ಖುದ್ದು ಸುರೇಶ್ ಗೋಪಿ ಅವರನ್ನು ಭೇಟಿಯಾಗಿ ಅಭಿನಂದಿಸಿದ್ದಾರೆ.
ಸುರೇಶ್ ಗೋಪಿ ಅವರು ತಿರುವನಂತಪುರಂನ ಶಾಸ್ತಾಮಂಗಲಂನಲ್ಲಿರುವ ತಮ್ಮ ನಿವಾಸದಲ್ಲಿದ್ದಾರೆ. ಪ್ರಕಾಶ್ ಜಾವಡೇಕರ್ ಮನೆಗೆ ಆಗಮಿಸಿ ಭೇಟಿ ಮಾಡಿದರು. ಸಭೆಯ ಬಳಿಕ ಮಾತನಾಡಿದ ಪ್ರಕಾಶ್ ಜಾವಡೇಕರ್, ಕೇರಳದಲ್ಲಿ ಬಿಜೆಪಿ ಇತಿಹಾಸ ನಿರ್ಮಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಕೇರಳ ರಾಜಕೀಯವನ್ನು ಬದಲಾಯಿಸಿದ್ದಾರೆ. ಇದು ಕೇರಳದ ಬಿಜೆಪಿ ಕಾರ್ಯಕರ್ತರು ಮಾಡಿದ ತ್ಯಾಗಕ್ಕೆ ಸಂದ ಮನ್ನಣೆ ಎಂದು ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಕೇರಳದಲ್ಲಿ ಇಬ್ಬರು ಸಂಸದರ ಗೆಲುವನ್ನು ತ್ರಿಶೂರ್ ಮತ್ತು ತಿರುವನಂತಪುರಂ ದೃಢಪಡಿಸಿದೆ ಎಂದರು. ಅಂತಿಮ ಫಲಿತಾಂಶದ ನಂತರ ಪಕ್ಷವು ಇದನ್ನು ಆಚರಿಸಲಿದೆ. ಕೇರಳದ ಕಾರ್ಯಕರ್ತರಿಗೆ ಇದೊಂದು ಸಂತಸದ ಸುದ್ದಿ. 75 ವರ್ಷಗಳ ಸುಧೀರ್ಘ ಹೋರಾಟ ಇದರ ಹಿಂದಿದೆ ಎಮದರು. ಎಲ್ಡಿಎಫ್ ಮತ್ತು ಯುಡಿಎಫ್ ಎರಡೂ ಜನರಿಗೆ ತಾರಮ್ಯ ಮಾಡಿವೆ ಎಂದಿರುವರು.
ಕಾಸರಗೋಡಿನಿಂದ ತಿರುವನಂತಪುರದವರೆಗೆ ಮೋದಿ ಆಡಳಿತದ ಪ್ರಗತಿಯನ್ನು ಜನರು ನೋಡುತ್ತಿದ್ದಾರೆ. ಈ ಗೆಲುವು ಮೋದಿಯವರ ಕಲ್ಯಾಣ ಯೋಜನೆಗಳಿಗೆ ಮನ್ನಣೆ ಕೂಡ ಆಗಿದೆ ಎಂದು ಜಾವಡೇಕರ್ ಹೇಳಿದ್ದಾರೆ.