ಮಧೂರು : ಜಿಲ್ಲಾ ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗದ ವತಿಯಿಂದ ವಿಶ್ವ ವೃಕ್ಷ ದಿನವನ್ನು ಆಚರಿಸಲಾಯಿತು. ಮಧೂರು ಸನಿಹದ ಶಿರಿಬಾಗಿಲು ಸರ್ಕಾರಿ ವೆಲ್ ಫೇರ್ ಎಲ್ ಪಿ ಶಾಲಾ ವಠಾರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಗೋಪಾಲಕೃಷ್ಣ ವೆಲ್ ಫೇರ್ ಎಲ್ ಪಿ ಶಾಲಾ ವಠಾರದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸಮಾರಂಭದಲ್ಲಿ ವಲಯ ಅರಣ್ಯಾಧಿಕಾರಿ ಕೆ.ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ಉಪ ವಲಯ ಅರಣ್ಯಾಧಿಕಾರಿ ಗ್ರೇಡ್ ಎನ್.ವಿ.ಸತ್ಯನ್, ವಲಯ ಅರಣ್ಯಾಧಿಕಾರಿಗಳಾದ ಕೆ.ಆರ್.ವಿಜಯನಾಥ್, ಎನ್. ನಾರಾಯಣ ನಾಯ್ಕ್, ಶಿಕ್ಷಕರಾದ ಎನ್.ಎನ್.ರಾಜೇಶ್, ಪಿ. ಅಲವಿ, ವಿದ್ಯಾ ವಿ. ವಿಜಯನ್, ಇಕೋ ಕ್ಲಬ್ ಕೋರ್ಡಿನೇಟರ್ ಎಂ.ಸನೀಶಾ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಸಿ.ಎಚ್.ಶಶಿಕಲಾ ಸ್ವಾಗತಿಸಿದರು. ಬೀಟ್ ಅರಣ್ಯಾಧಿಕಾರಿ ಎಂ.ಜೆ.ಅಂಜು ವಂದಿಸಿದರು.