ಕಾಸರಗೋಡು : ಜನಮೈತ್ರಿ ಶಿಶು ಸೌಹಾರ್ದ ಪೆÇಲೀಸ್ ಠಾಣೆ ಹಾಗೂ ತಳಂಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಕಾಸರಗೋಡು ನಗರ ಪೆÇಲೀಸ್ ಠಾಣೆ ಇನ್ಸ್‍ಪೆಕ್ಟರ್ ಶಾಜಿ ಪಟ್ಟೇರಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪರಿಸರ ಸಂರಕ್ಷಣೆಯಿಂದ ಮಾತ್ರ ಜೀವಸಂಕುಲಗಳಿಗೆ ಬದುಕು ನಡೆಸಲು ಸಾಧ್ಯ. ಮನುಕುಲದ ಶ್ರೇಯಸ್ಸಿಗಾಗಿ ಸಸಿಗಳನ್ನು ನೆಟ್ಟುಪೋಷಿಸುವುದು ಪ್ರತಿಯೊಬ್ಬನ ಕರ್ತವ್ಯವಾಗಬೇಕು ಎಂದು ತಿಳಿಸಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ನೌಫಲ್ ತಾಯಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಬಿಂದು ಟೀಚರ್, ಕಾಸರಗೋಡು ಮಕ್ಕಳ ಕಲ್ಯಾಣಾಧಿಕಾರಿ ಶಶಿಧರನ್, ಸಹಾಯಕ ಮಕ್ಕಳ ಕಲ್ಯಾಣ ಅಧಿಕಾರಿ ಸೋನಿಯಾ ಜಿಲ್‍ಜೋ ಜುಡಿತ್, ಸುಚೇತಾ ಮತ್ತು ರಾಜೇಶ್ ಉಪಸ್ಥಿತರಿದ್ದರು. ಪರಿಸರ ದಿನಾಚರಣೆ ಅಂಗವಾಘಿ ಶಾಲಾ ವಠಾರದಲ್ಲಿ ಸಸಿಗಳನ್ನು ನೆಡಲಾಯಿತು.