ಬದಿಯಡ್ಕ: ಏತಡ್ಕ ಎ.ಯು.ಪಿ.ಎಸ್.ಶಾಲೆಯ ಪ್ರವೇಶೋತ್ಸವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಾತೃ ಸಂಘದ ಅಧ್ಯಕ್ಷೆ ಶರ್ಮಿಳಾ ಈಳಂತೋಡಿ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಜನಪ್ರತಿನಿಧಿ ಜಿ.ಕೃಷ್ಣ ಶರ್ಮಾ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ನಾರಾಯಣ ಕುದಿಂಗಿಲ, ಎಸ್‍ಎಸ್‍ಜಿ ಉಪಾಧ್ಯಕ್ಷ ಕಿಶೋರ್ ರೈ, ಶಾಲಾ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್ ಹಾಗೂ ರಕ್ಷಕರು ಉಪಸ್ಥಿತರಿದ್ದರು.