ಮುಳ್ಳೇರಿಯ: ಬೆಳ್ಳೂರು ಗ್ರಾಮ ಪಂಚಾಯತಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 5ನೇ ವಿಶ್ವ ಪರಿಸರ ದಿನದ ನಿಮಿತ್ತ ಬೆಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಉದ್ಯೋಗ ಖಾತ್ರಿ ನಿವೇಶನಗಳಲ್ಲಿ ಸಸಿಗಳನ್ನು ನೆಟ್ಟು ಪರಿಸರ ದಿನಾಚರಣೆ ಬುಧವಾರ ನಡೆಯಿತು.
ಈ ಸಂದರ್ಭ ಪರಿಸರ ಪ್ರತಿಜ್ಞೆ ಸ್ವೀಕರಿಸಿ ನೂತನವಾಗಿ ನಿರ್ಮಿಸಿರುವ ಎಂಸಿಎಫ್ ಆವರಣ ಹಾಗೂ ಬಾಜಾ ರುದ್ರಭೂಮಿಯ ಹಸಿರೀಕರಣ ಚಟುವಟಿಕೆಯನ್ನು ಓಬುಡ್ಸ್ ಮೆನ್ ನಾಸಿರ್ ಉದ್ಘಾಟಿಸಿದರು. ಬೆಳ್ಳೂರು ಗ್ರಾ.ಪಂ.ಅಧ್ಯಕ್ಷ ಶ್ರೀಧರ ಎಂ. ಅಧ್ಯಕ್ಷತೆ ವಹಿಸಿದ್ದರು.ಗ್ರಾ.ಪಂ. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಜಯಕುಮಾರ್, ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ರೈ, ಗ್ರಾ.ಪಂ. ಸದಸ್ಯೆ ಗೀತಾ ಬಿ.ಎನ್., ಪಂಚಾಯತಿ ಎಎಸ್, ವಿಇಒ, ಕೃಷಿ ಅಧಿಕಾರಿ, ಎಂ.ಜಿ.ಎನ್.ಆರ್.ಇ.ಜಿ. ಉದ್ಯೋಗಿಗಳು, ಉದ್ಯೋಗ ಖಾತ್ರಿ ಕಾರ್ಮಿಕರು ಭಾಗವಹಿಸಿದ್ದರು. ಗ್ರಾಮ ಪಂಚಾಯತಿ ಪಂಚಾಯತಿ ಕಾರ್ಯದರ್ಶಿ ಗೀತಾ ಕುಮಾರಿ ಸ್ವಾಗತಿಸಿ, ಎಂ.ಜಿ.ಎನ್.ಆರ್.ಇ,ಜಿ.ಎ ಅಭಿಯಂತರೆ ಶಿಲ್ಪಾ ವಂದಿಸಿದರು.