HEALTH TIPS

ನೀಲೇಶ್ವರದಲ್ಲಿ ಅಗ್ನಿವೀರ್ ಸೇನಾ ನೇಮಕಾತಿ ರ್ಯಾಲಿ: -ಅವಲೋಕನಾ ಸಭೆ

             ಕಾಸರಗೋಡು: ಸೇನಾ ನೇಮಕಾತಿಗಾಗಿ ರಿಕ್ರೂಟ್‍ಮೆಂಟ್ ರ್ಯಾಲಿ ನೀಲೇಶ್ವರಂ ಇಎಂಎಸ್ ಕ್ರೀಡಾಂಗಣದಲ್ಲಿ ಜುಲೈ 18 ರಿಂದ 25 ರವರೆಗೆ  ನಡೆಯಲಿದೆ. ಕಾಸರಗೋಡು, ಕಣ್ಣೂರು, ವಯನಾಡು, ಕೋಯಿಕ್ಕೋಡ್, ಮಲಪ್ಪುರಂ, ಪಾಲಕ್ಕಾಡ್ ಮತ್ತು ತ್ರಿಶೂರ್ ಜಿಲ್ಲೆಗಳಿಂದ 3500 ಅಭ್ಯರ್ಥಿಗಳು ನೇಮಕಾತಿಯಲ್ಲಿ ಭಾಗವಹಿಸಲಿದ್ದು, ಒಂದು ದಿನದಲ್ಲಿ 800 ಅಭ್ಯರ್ಥಿಗಳು ಫಿಟ್‍ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ.

            ಕಳೆದ ಏಪ್ರಿಲ್‍ನಲ್ಲಿ ನಡೆಸಿದ ಲಿಖಿತ ಪರೀಕ್ಷೆಯ ಆಧಾರದ ಮೇಲೆ ಅಭ್ಯರ್ಥಿಗಳು ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಹತ್ತು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಸೇನಾ ನೇಮಕಾತಿ ರ್ಯಾಲಿ ನಡೆಸಲಾಗುತ್ತಿದ್ದು, ಪ್ರಮುಖವಾಗಿ ಕ್ರೀಡಾ ಕ್ಷಮತೆ ಪರೀಕ್ಷೆ ನಡೆಯಲಿದೆ.  ರಿಕ್ರೂಟ್‍ಮೆಂಟ್ ರ್ಯಾಲಿ ಯಶಸ್ವಿಗೊಳಿಸಲು ಸರ್ಕಾರದ ವಿವಿಧ ಇಲಾಖೆಗಳ ಸಮನ್ವಯ ಸಮಿತಿ ಸಭೆಯನ್ನು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ನಚೇಂಬರ್‍ನಲ್ಲಿ ನಡೆದರು. ಉತ್ತರ ಪ್ರದೇಶದ ಸೇನಾ ನೇಮಕಾತಿ ಉಸ್ತುವಾರಿ ಕರ್ನಲ್ ಪ್ರಭಾಕರ್, ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್ ಹಾಗೂ ವಿವಿಧ ಇಲಾಖೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ನೋಡಲ್ ಅಧಿಕಾರಿಯಾಗಿ ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್ ಅವರನ್ನು ನೇಮಿಸಲಾಯಿತು. ಮೂಲಸೌಕರ್ಯ ಕಲ್ಪಿಸಲು ನೀಲೇಶ್ವರ ನಗರಸಭಾ ಜಲ ಪ್ರಾಧಿಕಾರದ ಸಹಾಯದಿಂದ ಶುದ್ಧ ಕುಡಿಯುವ ನೀರನ್ನು ಒದಗಿಸಲಿದೆ. ಕುಟುಂಬಶ್ರೀ ವತಿಯಿಂದ ಲೋಕೋಪಯೋಗಿ ಇಲಾಖೆ ನೆರವಿನೊಂದಿಗೆ ಅಗತ್ಯ ಆಹಾರವನ್ನು ತಯಾರಿಸಿ ಪೂರೈಸಲಿದೆ. ನೀಲೇಶ್ವರಂ ತಾಲೂಕು ಆಸ್ಪತ್ರೆ ವೈದ್ಯಕೀಯ ನೆರವು ಹಾಗೂ ಪಟನ್ನಕ್ಕಾಡ್ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಸೇನಾ ಸಿಬ್ಬಂದಿಗೆ ವಸತಿ ಕಲ್ಪಿಸಲು ನಿರ್ಧರಿಸಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries