HEALTH TIPS

ಪೊಸಡಿಗುಂಪೆಯಲ್ಲಿ ವನಜೀವನ ಯಜ್ಞ

              ಕುಂಬಳೆ: ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್ -ಶ್ರೀಸಂಸ್ಥಾನಗೋಕರ್ಣ ಶ್ರೀರಾಮಚಂದ್ರಾಪುರ ಮಠದ ಅಂಗಸಂಸ್ಥೆಯಾದ ಪೊಸಡಿಗುಂಪೆಯ ಶ್ರೀ ಶಂಕರ ಧ್ಯಾನ ಮಂದಿರದ ಪರಿಸರದಲ್ಲಿ  ಶನಿವಾರ ವನಜೀವನ ಯಜ್ಞ ಕಾರ್ಯಕ್ರಮ ನಡೆಯಿತು

            ಗುರುವಂದನೆ, ಗೋಸ್ತುತಿಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಗುಂಪೆ ವಲಯದ ಕಾರ್ಯದರ್ಶಿ ಕೇಶವಪ್ರಸಾದ ಎಡಕ್ಕಾನ ಪ್ರಾಸ್ತಾವಿಕವಾಗಿ ಮಾತನಾಡಿದರು.  ನಿರ್ಮಲಕುಮಾರಿ ಚೆಕ್ಕೆ ಗಿಡ ನೆಡುವ ಮೂಲಕ ವನಜೀವನ ಯಜ್ಞಕ್ಕೆ ಚಾಲನೆ ನೀಡಿದರು.

         ಸಂಘಟನಾ ಕಾರ್ಯದರ್ಶಿ ವೆಂಕಟಕೃಷ್ಣ ಚೆಕ್ಕೆಮನೆ, ಚಂದ್ರಶೇಖರ ಭಟ್ ನೆರಿಯ, ರವಿಶಂಕರ ಬಾಯಾಡಿ, ಸಾರ್ಥಕ ಚೆಕ್ಕೆ,  ಶ್ರೀರಾಮ ಶರ್ಮ ಎಡಕ್ಕಾನ, ಸುಧಾಮ ಶರ್ಮ ಎಡಕ್ಕಾನ ಸಹಿತ ವಲಯದ  ಶಿಷ್ಯಬಂಧುಗಳು ಹಾಗೂ ಇತರ ಸಮಾಜದವರಾದ ತ್ಯಾಂಪ ಗೌಡ, ಪ್ರಶಾಂತ ಗೌಡ ಕಾಲ್ಚಂಡ್ರಿ ಭಾಗವಹಿಸಿ Pಔಸಡಿಗುಂಪೆಯ ಶಂಕರಧ್ಯಾನ ಮಂದಿರದ ಪರಿಸರದಲ್ಲಿ ವಿವಿಧ ತಳಿಗಳ ಗಿಡಗಳನ್ನು ನೆಟ್ಟು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು.


        ಪೊಸಡಿಗುಂಪೆಯ ಶ್ರೀಶಂಕರ ಧ್ಯಾನ ಮಂದಿರದ ಪರಿಸರದಲ್ಲಿ ನೆಡಲು ವೈವಿಧ್ಯಮಯ ತಳಿಯ ಗಿಡಗಳನ್ನು ಉಪ್ಪಿನಂಗಡಿ ಮಂಡಲ ಉಜಿರೆ ವಲಯದ ಕಾರ್ಯದರ್ಶಿ ಹಾಗೂ ನಡ ಘಟಕದ ಗುರಿಕ್ಕಾರ ಬೈಪದವು ರಾಮಕೃಷ್ಣ ಭಟ್ ಕುಕ್ಕಿನಕಟ್ಟೆ ಇವರು ಸೇವಾರೂಪದಲ್ಲಿ ಒದಗಿಸಿದ್ದರು. 

           ಗುಂಪೆ ವಲಯ ಯುವ ಪ್ರಧಾನ ಸಾತ್ವಿಕ್ ನೀರಮೂಲೆ ಮತ್ತು ಗಣೇಶ್ ನೀರಮೂಲೆ ಇವರ ನೇತೃತ್ವದಲ್ಲಿ ಗಿಡಗಳನ್ನು ಪೊಸಡಿಗುಂಪೆಗೆ ತಲುಪಿಸಲಾಗಿತ್ತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries