ಬದಿಯಡ್ಕ :ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ 17ರ ಹರೆಯದ ಬಾಲಕಿಯನ್ನು ವಿವಿಧೆಡೆ ಕರೆದೊಯ್ದು ಕಿರುಕುಳ ನೀಡಿರುವ ದೂರಿನನ್ವಯ ಬದಿಯಡ್ಕ ಹಾಗೂ ವಿದ್ಯಾನಗರ ಠಾಣೆ ಪೊಲೀಸರು ಇಬ್ಬರ ವಿರಉದ್ಧ ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದಾರೆ. ಬಾಲಕಿ ಈ ಹಿಂದೆ ಪೋಕ್ಸೋ ಅನ್ವಯ ಹತ್ತಕ್ಕೂ ಹೆಚ್ಚುಬಾರಿ ಠಾಣೆಗೆ ದೂರು ಸಲ್ಲಿಸಿದ್ದಾಳೆ.
ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಸಂದರ್ಭ ಬಾಲಕಿಗೆ 2022 ಏ. 18ರಂದು ಲೈಂಗಿಕ ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿ ಕೇಸು ದಾಖಲಾಗಿದೆ. ಕ್ವಾಟ್ರಸ್ ಒಂದರ ಮಾಲಿಕ ಮುಸ್ತಫಾ ಎಂಬಾತ ಬಾಲಕಿಯನ್ನು ಕಾರಿನಲ್ಲಿ ಆದೂರಿನ ತಙಳ್ ಬಳಿ ಕರೆದೊಯ್ದಿದ್ದು, ಅಲ್ಲಿ ತಙಳ್ ಕಿರುಕುಳಕ್ಕೆ ಯತ್ನಿಸಿದ್ದಾನೆ. ಕಿರುಕುಳ ಯತ್ನ ತಡೆಯಲೆತ್ನಿಸಿದಾಗ, ತನ್ನ ಮುಖಕ್ಕೆ ಹೊಡೆದಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ. ಅದೇ ದಿನ ಕಾರಿನಲ್ಲಿ ಬಾಲಕಿಯನ್ನು ಮಂಗಳೂರಿನ ವಸತಿಗೃಹಕ್ಕೆ ಕರೆದೊಯ್ದು ಕಿರುಕುಳ ನೀಡಿದ್ದನು. 29ರಂದು ಅಲ್ಲಿಂದ ಗೋವಾ ಕರೆದೊಯ್ಯುವ ಮಧ್ಯೆ ಕಾರಿನಲ್ಲಿ ಹಾಗೂ ಅಲ್ಲಿನ ವಸತಿಗೃಹದಲ್ಲಿ ಕಿರುಕುಳ ನೀಡಲಾಗಿದೆ. ಅಲ್ಲಿಂದ ವಾಪಸಾಗುವ ಮಧ್ಯೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದು, ಅಲ್ಲಿಯೂ ಕಿರುಕುಳ ನೀಡಲಾಗಿತ್ತು. ಈ ಬಗ್ಗೆ ವಿದ್ಯಾನಗರ ಠಾಣೆ ಪೊಲೀಸರೂ ಕೇಸು ದಾಖಲಿಸಿಕೊಂಡಿದ್ದಾರೆ.