ಮಧೂರು: ಅಂಗನವಾಡಿ ಪ್ರವೇಶ ಮಹೋತ್ಸವದ ಪ್ರಯುಕ್ತ ಮಧೂರು ಪಂಚಾಯತಿ ವ್ಯಾಪ್ತಿಯ ವಿವೇಕಾನಂದ ನಗರ ಅಂಗನವಾಡಿಯಲ್ಲಿ ಆಲ್ ಕೇರಳ ಪೋಟೋಗ್ರಾಫರ್ಸ್ ಅಸೋಸಿಯೇಶನ್ ಕಾಸರಗೋಡು ಪೂರ್ವ ಘಟಕದ ನೇತೃತ್ವದಲ್ಲಿ ಅಂಗನವಾಡಿ ಮಕ್ಕಳಿಗೆ ಕುರ್ಚಿ, ಆಟದ ಉಪಕರಣಗಳು ಮತ್ತು ಸಿಹಿ ವಿತರಿಸಲಾಯಿತು. ಘಟಕದ ಅಧ್ಯಕ್ಷ ಅಜಿತ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪಿಎನ್‌ಎಚ್ ಪ್ರಭಾರಿ ಹಾಗೂ ಜೆಪಿ ಎಚ್‌ಎನ್ ಮಧೂರು ಎಫ್‌ಎಚ್‌ಸಿ ಸಹನಾ ಕೆ.ಎಸ್., ಎಕೆಪಿಎ ಕಾಸರಗೋಡು ಜಿಲ್ಲಾ ಕೋಶಾಧಿಕಾರಿ ಸುನೀಲ್ ಕುಮಾರ್ ಪಿ.ಟಿ., ಜಿಲ್ಲಾ ನ್ಯಾಚುರಲ್ ಕ್ಲಬ್ ಸಂಯೋಜಕ ದಿನೇಶ್ ಇನ್‌ಸೈಟ್, ಜಿಲ್ಲಾ ಸಮಿತಿ ಸದಸ್ಯ ಸುರೇಶ್ ಚಂದ್ರ ಬಿ.ಜೆ, ಘಟಕದ ಕೋಶಾಧಿಕಾರಿ ಮಣಿ ಐ.ಪೋಕಸ್, ಘಟಕದ ಪಿ.ಆರ್.ಒ. ಮನೀಷ್, ಮಧೂರು ಪಂಚಾಯಿತಿ ೧೬ನೇ ವಾರ್ಡ್ ಆಶಾ ಕಾರ್ಯಕರ್ತೆ ಹರ್ಷಿತಾ ಮಾತನಾಡಿದರು. ಅಂಗನವಾಡಿ ಶಿಕ್ಷಕಿ ರೂಪಕಲಾ ಸ್ವಾಗತಿಸಿ, ೧೫ನೇ ವಾರ್ಡ್ ಆಶಾ ಕಾರ್ಯಕರ್ತೆ ಸುನಿತಾ ವಂದಿಸಿದರು. ಘಟಕ ಸಮಿತಿ ಸದಸ್ಯರಾದ ಸಂಜೀವ ರೈ, ರಾಜಶೇಖರ, ಶ್ರೀಕಾಂತ್, ಪ್ರಜ್ವಲ್ ಉಪಸ್ಥಿತರಿದ್ದರು.