ನವದೆಹಲಿ: ಇವಿಎಂಗಳ ಮತ ಎಣಿಕೆ ಫಲಿತಾಂಶ ಪ್ರಕಟಣೆಗೂ ಮುನ್ನ ಅಂಚೆ ಮತಗಳ ಫಲಿತಾಂಶ ಘೋಷಿಸುವುದೂ ಸೇರಿದಂತೆ ಜೂನ್ 4ರಂದು ಲೋಕಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಎಲ್ಲ ಮಾರ್ಗಸೂಚಿಗಳ ಪಾಲನೆಯನ್ನು ಖಾತ್ರಿಪಡಿಸುವಂತೆ 'ಇಂಡಿಯಾ' ಕೂಟದ ಮುಖಂಡರ ನಿಯೋಗವು ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.

ಚುನಾವಣಾ ಆಯೋಗವನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ಅಭಿಷೇಕ್ ಸಿಂಘ್ವಿ, 'ಲೋಕಸಭಾ ಚುನಾವಣೆಯ ವೇಳೆ ವಿರೋಧ ಪಕ್ಷಗಳ ನಿಯೋಗವು ಚುನಾವಣಾ ಆಯೋಗವನ್ನು ಭೇಟಿ ಮಾಡುತ್ತಿರುವುದು ಇದು ಮೂರನೇ ಬಾರಿ. ಭೇಟಿಯ ವೇಳೆ ಕೆಲವು ಮುಖ್ಯ ವಿಚಾರಗಳನ್ನು ಚರ್ಚಿಸಿದೆವು' ಎಂದು ತಿಳಿಸಿದರು.
'ಆಯೋಗದ ಮಾರ್ಗಸೂಚಿ ಅನುಸರಿಸುವಂತೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಮನವಿ ಸಲ್ಲಿಸಿದ್ದೇವೆ' ಎಂದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, 'ಕಂಟ್ರೋಲ್ ಯುನಿಟ್‌ಗಳಿಂದ ಇವಿಎಂಗಳನ್ನು ಸಿ.ಸಿ.ಟಿ.ವಿ. ಕ್ಯಾಮೆರಾಗಳ ನಿಗಾವಣೆಯಲ್ಲಿರುವ ಕಾರಿಡಾರ್‌ಗಳ ಮೂಲಕ ಸಾಗಿಸಬೇಕು ಮತ್ತು ಕಂಟ್ರೋಲ್ ಯುನಿಟ್‌ಗಳು ದಿನಾಂಕ ಮತ್ತು ಸಮಯವನ್ನು ಸರಿಯಾಗಿ ಪ್ರದರ್ಶಿಸುತ್ತಿವೆಯೇ ಎನ್ನುವುದನ್ನು ಪರಿಶೀಲಿಸಬೇಕು' ಎಂದು ಒತ್ತಾಯಿಸಿದ್ದಾಗಿ ಹೇಳಿದರು.