ಮಂಜೇಶ್ವರ: ಮೀಯಪದವಲ್ಲಿ ವಾಸಿಸುವ ಸುಬ್ರಹ್ಮಣ್ಯ ಯು(56) ಎಂಬವರು ಮಧುಮೇಹ ಆಧಿಕ್ಯಗೊಂಡು ಕಾಲ್ಬೆರಳಲ್ಲಿ ವ್ರಣವಾಗಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ವಾಸಿಸಲು ಸ್ವಂತ ಸೂರೂ ಇಲ್ಲದ ಇವರು ಬೇರೆಯವರ ಮನೆಯಲ್ಲಿ ಪತ್ನಿ ಹಾಗೂ ಇಬ್ಬರು ವಿದ್ಯಾರ್ಥಿಗಳಾಗಿರುವ ಮಕ್ಕಳೊಂದಿಗೆ ವಾಸಿಸುತ್ತಿದ್ದು, ಅನಾರೋಗ್ಯದ ಕಾರಣ ವೃತ್ತಿಗೂ ತೆರಳಲಾಗದೆ ಪರಿತಪಿಸುವಂತಾಗಿದೆ. ಪ್ರಸ್ತುತ ಕಾಲ ಹೆಬ್ಬೆರಳಲ್ಲಿ ಗಾಯವಾಗಿ ನಡೆದಾಡಲೂ ಸಾಧ್ಯವಾಗದ ದುರಿತ ಎದುರಾಗಿದೆ. ಸಂಕಷ್ಟದಲ್ಲಿರುವ ಸುಬ್ರಹ್ಮಣ್ಯರ ನೆರವಿಗೆ ಸಹೃದಯರ ನೆರವನ್ನು ಅಪೇಕ್ಷಿಸಲಾಗಿದೆ. ನೆರವು ನೀಡುವವರು
ಕೇರಳ ಬ್ಯಾಂಕ್ ಮೀಯಪದವು ಶಾಖೆ
ಖಾತೆ.ಸಂಖ್ಯೆಳ 40449100009490
ಐ.ಎಫ್.ಎಸ್.ಸಿ. ಸಂಖ್ಯೆ: ಕೆ.ಎಲ್.ಜಿ.ಬಿ.: 0040449 ಗೆ ನೆರವನ್ನು ನೀಡಬಹುದೆಂದು ವಿನಂತಿಸಲಾಗಿದೆ.
ಗೂಗಲ್ ಪೇ: 6238162363