ಪೆರ್ಲ: ಜಿಲ್ಲಾ ಆಡಳಿತ ಮತ್ತು ಜಿಲ್ಲಾ ವೈದ್ಯಕೀಯ ಕಚೇರಿ ಸಹಯೋಗದೊಂದಿಗೆ ಎಣ್ಮಕಜೆ ಪಂಚಾಯತ್ ಬಜಕೂಡ್ಲು ಸಾಯಿ ಗ್ರಾಮದಲ್ಲಿ ಜೂ.22 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಉಚಿತ ವೈದ್ಯಕೀಯ ಶಿಬಿರ ನಡೆಯಲಿರುವುದು. ಪೆರ್ಲ ಕುಟುಂಬ ಆರೋಗ್ಯ ಕೇಂದ್ರದ ನೇತೃತ್ವದಲ್ಲಿ ಶಿಬಿರ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.