ಕಾಸರಗೋಡು : ಕಾಞಂಗಾಡ್ ಮಾಲೋತ್ ನಲ್ಲಿ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಇಂದಿರಾ ಅವರ ಮನೆಗೆ ವೆಳ್ಳರಿಕುಂಡು ತಹಸೀಲ್ದಾರ್ ಮುರಳಿ ಭೇಟಿ ನೀಡಿದರು. ಸ್ಥಳೀಯರು ಹಾಗೂ ಸಾರ್ವಜನಿಕ ಕಾರ್ಯಕರ್ತರ ಸಹಕಾರದಿಂದ ಹಾನಿಗೀಡಾದ ಮನೆಯಲ್ಲಿಯ ಒಡೆದಿರುವ ಹೆಂಚುಗಳನ್ನು ತೆರವುಗೊಳಿಸಿ ವಾಸಯೋಗ್ಯವನ್ನಾಗಿ ಮಾಡಲಾಗಿದ್ದು, ಮನೆಯೊಳಗೆ ತುಂಬಿಕೊಂಡಿರುವ ಮಳೆ ನೀರನ್ನು ವಿಲೇವಾರಿಗೊಳಿಸಿ ವಾಸಯೋಗ್ಯವಾಗಿಸಲಾಯಿತು. ಮನೆಯ ಮೇಲೆ ಬಿದ್ದಿದ್ದ ಮರವನ್ನು ಕಡಿದು ತೆರವುಗೊಳಿಸಲಾಯಿತು.
ಮಳೆ: ಸ್ಥಳೀಯಾಡಳಿತ ಇಲಾಖೆಯ ನಿಯಂತ್ರಣ ಕೊಠಡಿ ಕಾರ್ಯಾರಂಭ:
ಮಳೆ ಜಿಲ್ಲೆಯಲ್ಲಿ ಬಿರುಸುಗೊಂಡಿದ್ದು ಸಾರ್ವಜನಿಕರು ಎದುರಿಸುತ್ತಿರುವ ತೊಂದರೆಗಳನ್ನು ಪರಿಹರಿಸಲು ಸ್ಥಳೀಯಾಡಳಿತ ಇಲಾಖೆ ಆರಂಭಿಸಿರುವ ನಿಯಂತ್ರಣ ಕೊಠಡಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ತಿರುವನಂತಪುರಂನ ಪ್ರಧಾನ ನಿರ್ದೇಶನಾಲಯದಲ್ಲಿ 24 ಗಂಟೆಗಳ ಕಾರ್ಯವನ್ನು ಪ್ರಾರಂಭಿಸಲಾಗಿದೆ.
ಈಗಾಗಲೇ ಕಂಟ್ರೋಲ್ ರೂಂನಲ್ಲಿ ಬಂದ ಮಾಹಿತಿಯನ್ನು ಸಂಬಂಧಪಟ್ಟವರಿಗೆ ವರ್ಗಾಯಿಸಿ ಹಲವು ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದು ಪ್ರಧಾನ ನಿರ್ದೇಶಕ ಎಂ.ಜಿ. ರಾಜಮಾಣಿಕ್ಯ ಮಾಹಿತಿ ನೀಡಿದರು.
ಕಂಟ್ರೋಲ್ ರೂಂ ಅಧಿಕಾರಿಗಳು ಆಯಾ ಸ್ಥಳೀಯಾಡಳಿತ ಕಾರ್ಯದರ್ಶಿಗಳು ಹಾಗೂ ಇತರೆ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳುತ್ತಿದ್ದಾರೆ.
ನಿಯಂತ್ರಣ ಕೊಠಡಿ ಸಂಖ್ಯೆ 0471 2317214 ಎಂಬ ಸಂಖ್ಯೆಗೆ ಸಾರ್ವಜನಿಕರು ಕರೆ ಮಾಡಿ ಮಳೆಯಿಂದ ಉಂಟಾಗಿರುವ ಜಲಾವೃತಗಳು, ಹಠಾತ್ ಸಾಂಕ್ರಾಮಿಕ ರೋಗಗಳು ಮತ್ತು ಇತರ ತೊಂದರೆಗಳ ಬಗ್ಗೆ ಮಾಹಿತಿ ನೀಡಬಹುದು ಎಮದು ಸೂಚಿಸಲಾಗಿದೆ.