ಧಾನ್‌ಬಾದ್: ಧಾನ್‌ಬಾದ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜಾರ್ಖಂಡ್‌ನ ಏಕೈಕ ತೃತೀಯ ಲಿಂಗಿ ಅಭ್ಯರ್ಥಿ ನೋಟಾಗಿಂತಲೂ ಕಡಿಮೆ ಮತಗಳನ್ನು ಪಡೆದಿದ್ದಾರೆ.
ಧಾನ್‌ಬಾದ್: ಧಾನ್‌ಬಾದ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜಾರ್ಖಂಡ್‌ನ ಏಕೈಕ ತೃತೀಯ ಲಿಂಗಿ ಅಭ್ಯರ್ಥಿ ನೋಟಾಗಿಂತಲೂ ಕಡಿಮೆ ಮತಗಳನ್ನು ಪಡೆದಿದ್ದಾರೆ.
ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುನೈನಾ ಕಿನ್ನೇರ್ ಅವರು, ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಘಟಾನುಘಟಿ ಅಭ್ಯರ್ಥಿಗಳಿಗೆ ಸವಾಲು ಹಾಕಿದ್ದರು.
ಕಿನ್ನೇರ್ ಅವರಿಗೆ 3,462 ಮತಗಳು ಬಂದರೆ, ನೋಟಾಗೆ 7,354 ಮತ ಚಲಾವಣೆಯಾಗಿದೆ.
'ನಾನು ಪಡೆದ ಮತಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅಭ್ಯರ್ಥಿಯಾಗಿ ಜನರು ನನ್ನನ್ನು ಸ್ವೀಕರಿಸಿದ ಬಗ್ಗೆ ನನಗೆ ಖುಷಿ ಇದೆ. ಅವರ ಬೆಂಬಲ ಮತ್ತು ಪ್ರೀತಿ ತೋರಿದ್ದಾರೆ. ಬಡವರು, ಅಗತ್ಯ ಇರುವವರಿಗೆ ಸಹಾಯಹಸ್ತ ಚಾಚುವ ನನ್ನ ಕೆಲಸ ಮುಂದುವರೆಸುತ್ತೇನೆ. ನಿರುದ್ಯೋಗ, ಹಣದುಬ್ಬರ ಮತ್ತು ನೀರಿನ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುತ್ತೇನೆ' ಎಂದಿದ್ದಾರೆ.
ಧಾನ್‌ಬಾದ್ ಕ್ಷೇತ್ರದಿಂದ 25 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ನೋಟಾಗಿಂತ ಕಡಿಮೆ ಮತ ಪಡೆದದ್ದು ಕಿನ್ನೇರ್ ಒಬ್ಬರೇ ಅಲ್ಲ. 18 ಪಕ್ಷೇತರ ಅಭ್ಯರ್ಥಿಗಳಿಗೂ ಕಡಿಮೆ ಮತ ಬಂದಿದೆ.
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಬಿಜೆಪಿಯ ಡುಲು ಮಹಟೊ 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.