HEALTH TIPS

ನೀಟ್‌ : ಕೆಲವರಿಗೆ ಹೆಚ್ಚು ಅಂಕ: ಆಕಾಂಕ್ಷಿಗಳಲ್ಲಿ ಅನುಮಾನ

         ವದೆಹಲಿ: ವೈದ್ಯಕೀಯ ಕೋರ್ಸ್‌ನ ಪ್ರವೇಶಕ್ಕೆ ನಡೆದಿದ್ದ ನೀಟ್‌ ಪರೀಕ್ಷೆಯಲ್ಲಿ ಕೆಲವರಿಗೆ ಹೆಚ್ಚು ಅಂಕಗಳು ಬಂದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಹಲವು ನೀಟ್‌ ಆಕಾಂಕ್ಷಿಗಳು ಆರೋಪಿಸಿದ್ದಾರೆ. ಈ ಕಾರಣದಿಂದಲೇ ಒಂದೇ ಪರೀಕ್ಷಾ ಕೇಂದ್ರದ ಆರು ಅಭ್ಯರ್ಥಿಗಳು ಸೇರಿದಂತೆ 67 ಅಭ್ಯರ್ಥಿಗಳು ಪ್ರಥಮ ರ್‍ಯಾಂಕ್‌ ಹಂಚಿಕೊಳ್ಳಲು ಸಾಧ್ಯವಾಗಿದೆ ಎಂದು ಅವರು ದೂರಿದ್ದಾರೆ.

           ಆದರೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (ಎನ್‌ಟಿಎ) ಈ ಕುರಿತ ಯಾವುದೇ ಅಕ್ರಮಗಳನ್ನು ನಿರಾಕರಿಸಿದೆ. ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿ ಬದಲಾವಣೆ ಆಗಿರುವುದು ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಸಮಯ ನಷ್ಟವಾದವರಿಗೆ ಕೃಪಾಂಕ ದೊರೆತಿರುವುದರಿಂದ ಕೆಲವರ ಅಂಕಗಳು ಹೆಚ್ಚಾಗಿವೆ ಎಂದು ಹೇಳಿದೆ.

            ಎನ್‌ಟಿಎ ಬುಧವಾರ ಸಂಜೆ ನೀಟ್‌ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು, ಹರಿಯಾಣದ ಒಂದೇ ಪರೀಕ್ಷಾ ಕೇಂದ್ರದ ಆರು ಅಭ್ಯರ್ಥಿಗಳು ಸೇರಿದಂತೆ ದೇಶದಾದ್ಯಂತ 67 ಅಭ್ಯರ್ಥಿಗಳು ಮೊದಲ ರ್‍ಯಾಂಕ್‌ ಅನ್ನು ಹಂಚಿಕೊಂಡಿದ್ದಾರೆ.

ಕಾಂಗ್ರೆಸ್‌ ಟೀಕೆ:

        ಈ ಕುರಿತು 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್‌, 'ನೀಟ್‌ ಪರೀಕ್ಷೆಯ ಬಳಿಕ ಫಲಿತಾಂಶವೂ ವಿವಾದಕ್ಕೆ ಸಿಲುಕಿದೆ. ಒಂದೇ ಕೇಂದ್ರದ ಆರು ಅಭ್ಯರ್ಥಿಗಳು 720ಕ್ಕೆ 720 ಅಂಕಗಳನ್ನು ಪಡೆದಿರುವುದು ಅನುಮಾನಕ್ಕೆ ಕಾರಣವಾಗಿದೆ. ಇದೇ ಅಲ್ಲದೆ, ಈ ಪರೀಕ್ಷೆಯಲ್ಲಿ ಇನ್ನೂ ಹಲವು ಅಕ್ರಮಗಳು ನಡೆದಿವೆ' ಎಂದು ಹೇಳಿದೆ.

             'ಮೊದಲಿಗೆ ಪ್ರಶ್ನೆ ಪತ್ರಿಕೆ ಸೋರಿಕೆ, ಈಗ ಫಲಿತಾಂಶದಲ್ಲಿನ ದೋಷವು ದೇಶದ ಲಕ್ಷಾಂತರ ಯುವ ಜನರ ಭವಿಷ್ಯವನ್ನು ಹಾಳಾಗುವಂತೆ ಮಾಡಿದೆ. ವಿದೇಶಗಳಲ್ಲಿ ಯುದ್ಧಗಳನ್ನು ನಿಲ್ಲಿಸುವುದಾಗಿ ಹೇಳಿಕೊಳ್ಳುವವರಿಗೆ, ದೇಶದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ' ಎಂದು ಕಾಂಗ್ರೆಸ್‌ ಟೀಕಿಸಿದೆ.

ಎನ್‌ಟಿಎ ಪ್ರತಿಕ್ರಿಯೆ:

            ಪರೀಕ್ಷಾ ಸಮಯದಲ್ಲಿ ಆದ ನಷ್ಟದ ಕುರಿತು ಕೆಲ ಅಭ್ಯರ್ಥಿಗಳು ಸಲ್ಲಿಸಿದ್ದ ಮನವಿಗಳನ್ನು ಪರಿಶೀಲಿಸಲಾಗಿದೆ. ಸುಪ್ರೀಂಕೋರ್ಟ್‌ ತೀರ್ಪಿನ (2018) ಪ್ರಕಾರ ಅಳವಡಿಸಿಕೊಂಡಿರುವ ಸಾಮಾನ್ಯ ಸೂತ್ರವನ್ನು ಆಧರಿಸಿ ಸಮಯ ನಷ್ಟದ ಪರಿಹಾರವನ್ನು ಅವರಿಗೆ ನೀಡಲಾಗಿದೆ ಎಂದು ಎನ್‌ಟಿಎ ತಿಳಿಸಿದೆ.

            ಅಭ್ಯರ್ಥಿಗಳಿಗೆ ಆಗಿರುವ ಪರೀಕ್ಷಾ ಸಮಯದ ನಷ್ಟವನ್ನು ಖಚಿತಪಡಿಸಿಕೊಂಡು, ಅವರಿಗೆ ಕೃಪಾಂಕದ ಮೂಲಕ ಪರಿಹಾರ ನೀಡಲಾಗಿದೆ. ಈ ಕಾರಣಕ್ಕೆ ಅಭ್ಯರ್ಥಿಗಳ ಅಂಕಗಳು 718 ಅಥವಾ 719 ಆಗಿರಬಹುದು ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ.

                ಪ್ರಶ್ನೆಪತ್ರಿಕೆಯನ್ನು ಹೊಸ ಎನ್‌ಸಿಇಆರ್‌ಟಿ ಪಠ್ಯಪುಸ್ತಕವನ್ನು ಆದರಿಸಿ ಸಿದ್ಧಪಡಿಸಲಾಗಿದೆ. ಆದರೆ ಕೆಲ ಅಭ್ಯರ್ಥಿಗಳು ಹಳೆಯ ಎನ್‌ಸಿಇಆರ್‌ಟಿ ಪಠ್ಯಗಳನ್ನು ಅಧ್ಯಯಿಸಿದ್ದಾರೆ. ಈ ಸಂಬಂಧವೂ ಕೆಲ ಅಭ್ಯರ್ಥಿಗಳು ಮನವಿಗಳನ್ನು ಸಲ್ಲಿಸಿದ್ದರು. ಎರಡೂ ಆಯ್ಕೆಗಳಲ್ಲಿ ಒಂದನ್ನು ಗುರುತಿಸಿದ ಎಲ್ಲ ಅಭ್ಯರ್ಥಿಗಳಿಗೆ ಐದು ಅಂಕಗಳನ್ನು ಕೃಪಾಂಕವಾಗಿ ಎನ್‌ಟಿಎ ನಿಗದಿಪಡಿಸಿತು. ಈ ಕಾರಣದಿಂದ, ಒಟ್ಟು 44 ಅಭ್ಯರ್ಥಿಗಳ ಅಂಕಗಳು 715ರಿಂದ 720ಕ್ಕೆ ಏರಿಕೆಯಾಗಿದೆ. ಇದರಿಂದ ಮೊದಲ ರ್‍ಯಾಂಕ್‌ ಪಡೆದವರ ಸಂಖ್ಯೆಯೂ ಏರಿಕೆಯಾಗಿದೆ ಎಂದು ಅವರು ಎನ್‌ಟಿಎ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries