ಕಾಸರಗೋಡು: ನಗರದ ಬಿ.ಇ.ಎಂ ಪ್ರೌಢಶಾಲೆಯಲ್ಲಿ 2024- 25ನೇ ಶೈಕ್ಷಣಿಕ ವರ್ಷದ ರಕ್ಷಕ - ಶಿಕ್ಷಕ ಸಂಘದ ಸಭೆ ಶಾಲೆಯಲ್ಲಿ ನಡೆಯಿತು. ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ ರವಿಶಂಕರ್ ಸಿ.ಎಚ್ ಅಧ್ಯಕ್ಷತೆ ವಹಿಸಿದ್ದರು.
ಶಾಲೆಯ ಭೌತಿಕ ಅವಶ್ಯಕತೆಗಳ ಕುರಿತು ಸಾರ್ವಜನಿಕ ಶಿಕ್ಷಣ ಸಂರಕ್ಷಣಾಯಜ್ಞದ ಅಧ್ಯಕ್ಷ ಕೆ ಎನ್ ವೆಂಕಟರಮಣ ಹೊಳ್ಳ ಅವರು ಮಾತನಾಡಿದರು . ಶಾಕಾ ಶಿಸ್ತು ಸಮಿತಿ ಅಧ್ಯಾಪಕ ಯಶವಂತ ವೈ, ಮಾತೃ ಸಂಘದ ಅಧ್ಯಕ್ಷೆ ಹಾಗೂ ನಗರಸಭೆಯ ಸದಸ್ಯೆ ಶಾರದಾ ಬಿ, ರಕ್ಷಕ ಶಿಕ್ಷಕ ಸಂಘದ ಮಾಜಿ ಉಪಾಧ್ಯಕ್ಷ ಶ್ರೀಯುತ ಪ್ರೇಮ್ ಜಿತ್ ಹಾಗೂ ಶಾಲೆಯ ಎಂಟನೇ ತರಗತಿ ಶಿಕ್ಷಕಿ ಸೌಮ್ಯ ಮಯ್ಯ, ಪೂರ್ಣಿಮಾ, ಸವಿತಾ ಹಾಗೂ ಪ್ರಿಯ ಉಪಸ್ಥಿತರಿದ್ದರು.