ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿ ಮಣಿಯಂಪಾರೆ ಅಂಗನವಾಡಿ ಮಕ್ಕಳ ಪ್ರವೇಶೋತ್ಸವ ಗುರುವಾರ ಜರಗಿತು. ಕಾರ್ಯಕ್ರಮವನ್ನು ಪಂ.ಸದಸ್ಯ ರಾಧಾಕೃಷ್ಣ ನಾಯಕ್ ಶೇಣಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಂಗನವಾಡಿ ಮುಗಿಸಿ ಶಾಲೆಗೆ ತೆರಳಲು ಸನ್ನದ್ಧರಾದ ಮಕ್ಕಳಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಜೆಪಿಎಚ್ ಎನ್ ಶ್ರುತಿ ಮಕ್ಕಳ ಪೋಷಕ ಆಹಾರದ ಬಗ್ಗೆ ತರಗತಿ ನೀಡಿದರು. ಮಕ್ಕಳ ರಕ್ಷಕರು ಪಾಲ್ಗೊಂಡರು. ಅಂಗನವಾಡಿ ಅಧ್ಯಾಪಕಿ ಗೀತಾ ಎಂ ಸ್ವಾಗತಿಸಿ, ವಿಜಯಲಕ್ಷ್ಮಿ ಕೆ ವಂದಿಸಿದರು.