ಉಪ್ಪಳ: ಉಪ್ಪಳದ ಫ್ಲ್ಯಾಟ್ ಒಂದರಲ್ಲಿ ಆನೆಕಲ್ಲು ನಿವಾಸಿಯೊಬ್ಬರ ಮೃತದೇಹ ಪತ್ತೆಯಾಘಿದೆ. ಆನೆಕಲ್ಲು ಕದಿನಮೂಲೆ ನಿವಾಸಿ ಶೇಖ್ ಅಬ್ದುಲ್ ಖಾದರ್(50)ಮೃತಪಟ್ಟವರು. ಉಪ್ಪಳದ ರೋಸ್‍ಗಾರ್ಡ್ ಅಪಾರ್ಟ್‍ಮೆಂಟ್‍ನ ಇವರು ವಾಸಿಸುತ್ತಿದ್ದ ಕೊಠಡಿಯ ಸ್ನಾನದಗೃಹದಲ್ಲಿ ಮೃತದೇಹ ಪತ್ತೆಯಾಗಿದೆ.
ಇವರ ಪತ್ನಿ ಪುತ್ರಿಯೊಂದಿಗೆ ತವರಿಗೆ ತೆರಳಿದ್ದ ಹಿನ್ನೆಲೆಯಲ್ಲಿ ಕಳೆದ ಮೂರು ದಿವಸಗಳಿಂದ ಕೊಠಡಿಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಶುಕ್ರವಾರ ಬೆಳಗ್ಗೆ ಕೊಠಡಿಯಿಂದ ದುರ್ವಾಸನೆ ಹೊರಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಒಳಗಿಂದ ಬಾಗಿಲು ಭದ್ರಪಡಿಸಲಾಗಿದ್ದು, ಪೊಲಿಸರು ಆಗಮಿಸಿ ಬಾಗಿಲು ಒಡೆದುನೋಡಿದಾಗ ಮೃತದೇಹ ಪತ್ತೆಯಾಗಿದೆ. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.