HEALTH TIPS

ಮುಂಬೈ ಮೆಟ್ರೊಗೆ ಇದೀಗ ದಶಮಾನೋತ್ಸವದ ಸಂಭ್ರಮ

         ಮುಂಬೈ: ಮುಂಬೈನ ಮೊದಲ ಮೆಟ್ರೊ ಮಾರ್ಗ ವರ್ಸೋವಾ-ಘಾಟ್‌ಕೋಪರ್ (Versova to Ghatkopar) ಮಾರ್ಗಕ್ಕೆ ಇದೀಗ ದಶಮಾನೋತ್ಸವದ ಸಂಭ್ರಮ.

           Reliance Infrastructure ಸಹಯೋಗದಲ್ಲಿ ಜೂನ್ 8, 2014ರಂದು ಮುಂಬೈನ ಮೊದಲ ಮೆಟ್ರೊ ಲೈನ್ ಆರಂಭವಾಗಿತ್ತು. ಈ ಮಾರ್ಗ ಹತ್ತು ವರ್ಷಗಳಲ್ಲಿ 11 ಲಕ್ಷ ಟ್ರಿಪ್‌ಗಳನ್ನು ಪೂರ್ಣಗೊಳಿಸಿದೆ.


           ಮುಂಬೈ ಮಹಾನಗರಿ ಜನ ಲೋಕಲ್ ಟ್ರೈನ್‌ಗಳನ್ನು ಹೆಚ್ಚು ನೆಚ್ಚಿಕೊಂಡಿದ್ದರು. ಈ ಮಾರ್ಗ ಆರಂಭವಾದ ಮೇಲೆ ಲೋಕಲ್ ಟ್ರೈನ್‌ಗಳ ಮೇಲಿನ ಒತ್ತಡ ಕಡಿಮೆಯಾಗಿತ್ತು.

           ಈ ಕುರಿತು ಸಂತಸ ಹಂಚಿಕೊಂಡು ಮಾಹಿತಿ ನೀಡಿರುವ ಮುಂಬೈ ಮೆಟ್ರೊ, ಹತ್ತು ವರ್ಷಗಳಲ್ಲಿ ಈ ಮಾರ್ಗದಲ್ಲಿ 90.70 ಕೋಟಿ ಜನ ಪ್ರಯಾಣಿಸಿದ್ದಾರೆ. ದಶಮಾನೋತ್ಸವವನ್ನು ಮುಂಬೈ ಜನ ಸಂಭ್ರಮಿಸುತ್ತಿದ್ದಾರೆ ಎಂದು ತಿಳಿಸಿದೆ.

             ಪೂರ್ವ ಮತ್ತು ಪಶ್ಚಿಮ ಉಪನಗರಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಲು 10 ವರ್ಷದ ಹಿಂದೆ ವರ್ಸೋವಾ-ಅಂಧೇರಿ-ಘಾತ್‌ಕೋಪರ್ ಮಾರ್ಗ ನಿರ್ಮಾಣವಾಗಿತ್ತು. ಈ ಮಾರ್ಗದಲ್ಲಿ ಒಟ್ಟು 12 ನಿಲ್ದಾಣಗಳಿವೆ.

                 ಸಾಮಾನ್ಯ ದಿನಗಳಲ್ಲಿ ಪ್ರತಿದಿನ 4.5 ಲಕ್ಷ ಪ್ರಯಾಣಿಕರು ಈ ಮಾರ್ಗದಲ್ಲಿ ಪ್ರಯಾಣಿಸುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries