HEALTH TIPS

ಪಠ್ಯದಲ್ಲಿಲ್ಲದ ಪ್ರಶ್ನೆ: ಎನ್‌ಟಿಎ ಅಭಿಪ್ರಾಯ ಕೇಳಿದ ದೆಹಲಿ ಹೈಕೋರ್ಟ್‌

          ವದೆಹಲಿ: ಈ ಬಾರಿಯ 'ನೀಟ್‌'ನಲ್ಲಿ ಪಠ್ಯದಲ್ಲಿ ಇಲ್ಲದ ಪ್ರಶ್ನೆ ಕೇಳಲಾಗಿದೆ ಎಂದು ಆರೋಪಿಸಿ ಅಭ್ಯರ್ಥಿಯೊಬ್ಬರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ಅಭಿಪ್ರಾಯ ಕೇಳಿದೆ.

          ಭೌತವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಪತ್ರಿಕೆಯಲ್ಲಿ ಒಂದು ಪ್ರಶ್ನೆ 'ರೇಡಿಯೊ ಆಯಕ್ಟಿವಿಟಿ' ವಿಷಯವನ್ನು ಆಧಾರವಾಗಿಟ್ಟುಕೊಂಡು ಕೇಳಲಾಗಿತ್ತು.

           ಈ ವರ್ಷದ ನೀಟ್‌ಗೆ ಈ ವಿಷಯ ಪಠ್ಯದ ಭಾಗವಾಗಿರಲಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ.

ಮತ್ತೊಂದು ಪ್ರಶ್ನೆಯಲ್ಲೂ ತಪ್ಪು ಕಾಣಿಸಿಕೊಂಡಿದ್ದು, 'ತಪ್ಪಾದ ಆಯ್ಕೆ'ಯನ್ನು ಸರಿ ಉತ್ತರ ಎಂದು ಎನ್‌ಟಿಎ ಘೋಷಿಸಿದೆ ಎಂದು ಅವರು ದೂರಿದ್ದಾರೆ.

              ಅರ್ಜಿಯ ವಿಚಾರಣೆ ನಡೆಸಿದ ರಜಾ ಕಾಲದ ಪೀಠದ ನ್ಯಾಯಮೂರ್ತಿ ಧರ್ಮೇಶ್‌ ಶರ್ಮ ಅವರು ಈ ಬಗ್ಗೆ ಪ್ರತಿಕ್ರಿಯಿಸಲು ಕೇಂದ್ರ ಸರ್ಕಾರ, ಎನ್‌ಟಿಎ ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗವನ್ನು ಪ್ರತಿನಿಧಿಸುವ ವಕೀಲರಿಗೆ ಎರಡು ವಾರಗಳ ಕಾಲಾವಕಾಶ ನೀಡಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries