ಕಾಸರಗೋಡು: ವಾಸೋದ್ಯಮಕ್ಕೆ ಉದ್ಯಮ ಸ್ಥಾನಮಾನ ನೀಡಿ ಅಗತ್ಯ ಸವಲತ್ತು ಒದಗಿಸಿಕೊಡಬೇಕು ಎಂಬುದಾಗಿ 'ಎಂಪವರ್ ಕಾಸರಗೋಡು'ಸಂಘಟನಾ ಸಮಿತಿ ಸರ್ಕಾರವನ್ನು ಆಗ್ರಹಿಸಿದೆ. ಈ ಸಂದರ್ಭ ಸಂಘಟನಾ ಸಮಿತಿಯ ನೂತನ ಕಚೇರಿಯ ಉದ್ಘಾಟನೆ ನಡೆಯಿತು. ಕೇರಳ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ರಾಜಾರಾಮ ಎಸ್. ಪೆರ್ಲ ಉದ್ಘಾಟಿಸಿದರು. ಸಂಘಟನಾ ಸಮಿತಿಯ ಅಧ್ಯಕ್ಷ ರವೀಂದ್ರನ್ ಕನ್ನಂಗೈ ಅಧ್ಯಕ್ಷತೆ ವಹಿಸಿದ್ದರು.
ಅನೂಪ್ ಕಳನಾಡ್, ಐಶ್ವರ್ಯ ಕುಮಾರನ್, ಮುಹಮ್ಮದಲಿ, ಪ್ರದೀಪ್ ಕುಮಾರ್ ಒಮೆಗಾ, ಸೈಫುದ್ದೀನ್ ಕಳನಾಡ್, ಅಬ್ದುಲ್ ಕಾದರ್ ಪಳ್ಳಿಪುಳ, ಅಸ್ಗರಲಿ, ಅಬ್ದುಲ್ ನಾಸರ್, ಸುಲೈಖಾ ಮಾಹಿನ್ ಮತ್ತು ಡಾ.ರಶ್ಮಿ ಪ್ರಕಾಶ್ ಉಪಸ್ಥಿತರಿದ್ದರು.