ತಿರುವನಂತಪುರಂ: ಮೂಡಲಪ್ಪೊಳಿ ಬಂದರಿನ ಬಾಯಿಯಲ್ಲಿ ಬೋಟ್ ಪಲ್ಟಿಯಾಗಿ ಮೀನುಗಾರರೊಬ್ಬರು ಮೃತಪಟ್ಟಿದ್ದಾರೆ. ತಿರುವನಂತಪುರದ ಅಂಜಿತೆಂಗ್ ನಿವಾಸಿ ವಿಕ್ಟರ್ (50) ಮೃತರು.
ಮೀನುಗಾರಿಕೆ ಮುಗಿಸಿ ವಾಪಸಾಗುತ್ತಿದ್ದಾಗ ಅಳಿವೆಯಲ್ಲಿ ಜೋರಾದ ಪ್ರವಾಹಕ್ಕೆ ದೋಣಿ ಮಗುಚಿ ಬಿದ್ದಿದೆ. ಇಂದು ನಸುಕಿನ 1:30ರ ಸುಮಾರಿಗೆ ಅಪಘಾತ ಸಂಭವಿಸಿದೆ.
ವಿಕ್ಟರ್ ಜೊತೆ ದೋಣಿಯಲ್ಲಿದ್ದ ಮೂವರು ಕಾರ್ಮಿಕರು ಈಜಿಕೊಂಡು ಸುರಕ್ಷಿತ ಸ್ಥಳಕ್ಕೆ ತಲುಪಿದರು. ಪ್ರಾನ್ಸಿಸ್, ಸುರೇಶ್ ಮತ್ತು ಯೇಸುದಾಸ್ ಬದುಕುಳಿದಿದ್ದಾರೆ. ಅಂಜಿತೆಂಗ್‍ನ ಜೋಬೋ ಎಂಬವರ ಮಾಲಕತ್ವದ ಚಿಂತಾಹಿರಾ ಎಂಬ ದೋಣಿ ಮಗುಚಿ ಬಿದ್ದಿದೆ. ಅಪಘಾತದ ಸಮಯದಲ್ಲಿ ನದೀಮುಖದಲ್ಲಿದ್ದ ಮೀನುಗಾರಿಕಾ ಸಿಬ್ಬಂದಿ ಮತ್ತು ಕರಾವಳಿ ಪೆÇಲೀಸರ ಹುಡುಕಾಟದ ಸಮಯದಲ್ಲಿ ವಿಕ್ಟರ್ ಪತ್ತೆಯಾಗಿದ್ದಾನೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಿರಾಯಾಂಕಿಜ್ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.