ಕಾಸರಗೋಡು: ತಿರುವನಂತಪುರದಲ್ಲಿ ನಡೆಯುತ್ತಿರುವ ಕೇರಳ ರಾಜ್ಯ ಜೂನಿಯರ್ ಈಜು ಚಾಂಪಿಯನ್ಷಿಪ್ ನಲ್ಲಿ ಕಾಸರಗೋಡು ನಿವಾಸಿ ರೆಹಾನ್ ಗೆರಿ ದಾಖಲೆ ನಿರ್ಮಿಸಿದ್ದಾರೆ. ಬಾಲಕರ 50 ಮೀಟರ್ ಬ್ಯಾಕ್ ಸ್ಟ್ರೋಕ್ ಸ್ಪರ್ಧೆಯಲ್ಲಿ ಅವರು ದಾಖಲೆಯ 29.88 ನಿಮಿಷಗಳಲ್ಲಿ ಈಜಿ ಚಿನ್ನದ ಪದಕ ಗೆದ್ದಿದ್ದಾರೆ. ರೆಹಾನ್ ಗೆರಿ ಅವರು ಇನ್ನೂ ನಾಲ್ಕು ವಿಭಾಗಗಳಲ್ಲಿ ಸ್ಪರ್ಧಿಸುತ್ತಿದ್ದಾರೆ.