ಮುಳ್ಳೇರಿಯ: ಪೇರಡ್ಕ ಮಹಾತ್ಮಜಿ ಗ್ರಂಥಾಲಯ ಮತ್ತು ವಾಚನಾಲಯ ಹಾಗೂ ನವಭಾರತ ಗ್ರಾಮಾಭಿವೃದ್ಧಿ ಕಲಾ ಕೇಂದ್ರದ ವತಿಯಿಂದ ವಾಚನಗೋಷ್ಠಿಯ ಉದ್ಘಾಟನೆ, ಎಲ್.ಎಸ್.ಎಸ್, ಯು.ಎಸ್‍ಎಸ್, ಎಸ್‍ಎಸ್‍ಎಲ್‍ಸಿ, ಪ್ಲಸ್ ಟು ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಿಮುಕ್ತಿ ಮಾರ್ಗದರ್ಶಕ, ಅಬಕಾರಿ ಕಚೇರಿಯ ಸಿವಿಲ್ ಅಬಕಾರಿ ಅಧಿಕಾರಿ ಚಾಲ್ರ್ಸ್ ಜೋಸ್ ಅವರು ವಾಚನಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಲೈಬ್ರರಿ ಕೌನ್ಸಿಲ್ ಕಾರ್ಯಕಾರಿ ಸಮಿತಿ ಸದಸ್ಯ ಕೆ.ರವೀಂದ್ರನ್ ಅವರು ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆಯ ದುಷ್ಪರಿಣಾಮದ ಬಗ್ಗೆ ಜಾಗೃತಿ ಮಾಹಿತಿ ನೀಡಿದರು. ವಿನೋದಕುಮಾರ್ ಸಿ, ರಾಜೇಶ್ ಟಿ.ವಿ, ಪಿ.ರಾಧಾಕೃಷ್ಣನ್, ವೈ.ಸುಕುಮಾರನ್, ದಾಮೋದರನ್, ಸಾಜು ಟಿ, ವಿನೋದ್ ಕುಮಾರ್ ಟಿ.ವಿ, ರವಿ ಪಾಂಡಿ ಮತ್ತು ಶಾಂತಕುಮಾರಿ ಮಾತನಾಡಿದರು. ಗ್ರಂಥಾಲಯ ಕಾರ್ಯದರ್ಶಿ ಸತ್ಯನ್ ಕೆ ಸ್ವಾಗತಿಸಿ, ನವಭಾರತ್ ಕ್ಲಬ್ ಅಧ್ಯಕ್ಷ ಗಿರೀಶ್ ಕುಮಾರ್ ವಂದಿಸಿದರು.