ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಅಂಗವಾಗಿ ಕರಡು ಸಂಯೋಜಿತ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಈ ಬಗ್ಗೆ ದುರು ಮತ್ತು ಆಕ್ಷೇಪಣೆಗಳನ್ನು ಜೂನ್ ೨೧ ರವರೆಗೆ ಸ್ವೀಕರಿಸಲಾಗುವುದು.
ಜನವರಿ ೧, ೨೦೨೪ ರಂದು ಅಥವಾ ಅದಕ್ಕೂ ಮೊದಲು ೧೮ ವರ್ಷ ವಯಸ್ಸು ಪೂರ್ತಿಯಾದವರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗುತ್ತದೆ. ಜುಲೈ ೧ ರಂದು ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು.
ಉಪಚುನಾವಣೆ ನಡೆಯುವ ಕಾಸರಗೋಡು ನಗರಸಭೆಯ ೨೪ನೇ ವಾರ್ಡ್ ಖಾಸಿಲೆನ್, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯಿತಿಯ ೩ನೇ ವಾರ್ಡ್ ಕೋಟಕುನ್ನು ಮತ್ತು ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯಿತಿಯ ೧೪ನೇ ವಾರ್ಡ್ ಮಲ್ಲಂಗೈಯಲ್ಲಿಯೂ ಅನಿವಾಸಿ ಭಾರತೀಯರ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುವುದು.